
ಉದಯವಾಹಿನಿ,ಬಂಗಾರಪೇಟೆ : ತಾಲ್ಲೂಕಿನ ಕಂದಾಯ ಇಲಾಖೆಯ ವಿರುದ್ಧ ಬಹುತೇಕ ಸಂಘ ಸಮಸ್ಯೆಗಳು ಪದೇಪದೇ ನಕಲಿ ಖಾತೆಗಳ ಆರೋಪಗಳನ್ನು ಮಾಡುತ್ತಿರುವುದು ಸತ್ಯವಾಗಿದ್ದು ಅದಕ್ಕೆ ಪುಷ್ಟಿ ನೀಡಿದ್ದು ಕಾಮಸಮುದ್ರ ಹೋಬಳಿ ಕೇತಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಮರಿಹಳ್ಳಿ ಗ್ರಾಮದಲ್ಲಿ ಶ್ಯಾಮಪ್ಪ ಮತ್ತು ಸುಬ್ರಮಣಿ ಹೆಸರಿಗೆ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ಸಮಂಜಸವಲ್ಲ .ಆದ್ದರಿಂದ ನಕಲಿ ಖಾತೆಗಳ ಕರಾಳ ಅಧ್ಯಯಕ್ಕೆ ಕೊನೆ ಎಂಬುದು ತಿಳಿಯದಂತಾಗಿದೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಪ್ರಶ್ನಿಸಿದರು.
ಕಾಮಸಮುದ್ರ ಹೋಬಳಿಯ ದೊಡ್ಡ ಮರಿಹಳ್ಳಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಜುನಾಥ್ ಬಿನ್ ನಾಗರಾಜಪ್ಪ ರವರ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಚಿಕ್ಕಪ್ಪನವರಾದ ಶಾಮಪ್ಪ ಮತ್ತು ಸುಬ್ರಮಣಿ ರವರು ನೀಡದೆ ನಕಲಿ ಖಾತೆಗಳನ್ನು ನಮ್ಮ ಹೆಸರಿಗೆ ಸೃಷ್ಟಿಸಿಕೊಂಡು ಭೂಕಬಳಿಕೆಯನ್ನು ಮಾಡಿಕೊಂಡಿದ್ದಾರೆ .ಘಟನೆಯ ವಿವರ :ಇದೇ ಗ್ರಾಮದ ಗಂಗಪ್ಪ ಎಂಬುವರಿಗೆ ನಾಗರಾಜು ಶಾಮಪ್ಪ ಸುಬ್ರಮಣಿ ಗೋವಿಂದಪ್ಪ ಎಂಬ ನಾಲ್ಕು ಜನ ಮಕ್ಕಳಿದ್ದು ,ಹಿರಿಯ ಮಗನಾದ ಲೇಟ್ ನಾಗರಾಜು ಎಂಬುವರಿಗೆ ಶಾಂತಮ್ಮ ಮತ್ತು ರಾಣಿ ಅಮ್ಮ ಇಬ್ಬರೂ ಹೆಂಡತಿಯರು ಇರುತ್ತಾರೆ ಕಾಲಕ್ರಮೇಣ ಗಂಗಪ್ಪ ಮತ್ತು ಹಿರಿಯ ಮಗ ನಾಗರಾಜಪ್ಪನವರು ನಿಧನರಾದ ನಂತರ ಗಂಗಪ್ಪನ ಹೆಸರಿನಲ್ಲಿ ಇದ್ದ ಸರ್ವೆ ನಂಬರ್ 35 /2, 37/3 ರಲ್ಲಿ ಕ್ರಮವಾಗಿ 1 ಎಕರೆ 7 ಗುಂಟೆ ಹಾಗೂ ಒಂದು ಎಕರೆ ಒಂದು ಗುಂಟೆ ಮತ್ತು ಸರ್ವೇ ನಂಬರ್ ಹೇಳರಲ್ಲಿ ಒಂದು ಎಕರೆ 30ಗುಂಟೆ ಜಮೀನು ಇರುತ್ತದೆ .ಆದರೆ ಶಾಮಪ್ಪ ಮತ್ತು ಸುಬ್ರಮಣಿಯವರು ತನ್ನ ಹಿರಿಯ ಸಹೋದರ ನಾಗರಾಜಪ್ಪನವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡದೆ ತಾವೇ ಕಬಳಿಸಿಕೊಂಡು ನಕಲಿ ಖಾತೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು .ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಚಿಂಟು ರಾಮಚಂದ್ರ , ಕಾರ್ಮಿಕ ಘಟಕದ ಅಧ್ಯಕ್ಷ ಅಮರೇಶ್,ರಾಜ್ಯ ಮುಖಂಡ ಕೃಷ್ಣಮೂರ್ತಿ ,ತಿಪ್ಪಯ್ಯ ಇನ್ನು ಮುಂತಾದವರು ಹಾಜರಿದ್ದರು .
