
ಉದಯವಾಹಿನಿ, ಸಿಂಧನೂರು : ನನ್ನ ದೇಶ ನನ್ನ ಮಣ್ಣು ಅಭಿಯಾನದ ಪ್ರಯುಕ್ತ ಸಿಂಧನೂರಿನ ಪವಿತ್ರ ಮಣ್ಣನ್ನು ಅಮೃತ ಕಳಸದ ಮೂಲಕ ದೆಹಲಿಗೆ ಕಳುಹಿಸಿಕೊಡಲಾಯಿತು ಎಂದು ನಗರ ಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರು ಅವರ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು ನನ್ನ ದೇಶ ನನ್ನ ಮಣ್ಣು ಅಭಿಯಾನ ದೊಂದಿಗೆ ಗುರುವಾರ ನಿನ್ನೆ ಸಂಜೆ ವೇಳೆ ಈ ಪವಿತ್ರ ಮಣ್ಣನ್ನು ತಾಲೂಕಿನ ಪ್ರತಿನಿಧಿಯಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಸಿಂಧನೂರಿನ ವಿದ್ಯಾರ್ಥಿ ಕುಮಾರ ಬಸವರಾಜ್ ತಂದೆ ಗಂಗಪ್ಪ, ಎನ್ ಎಸ್ ಎಸ್ ಸ್ವಯಂ ಸೇವಕ ಅವರು ಭಾಗವಹಿಸಲಿದ್ದಾರೆ, ಎಂದು ಹೇಳಿದರು ಈ ಪವಿತ್ರ ಮಣ್ಣನ್ನು ನಗರದ ಮಹಾತ್ಮ ಗಾಂಧೀಜಿಯವರ ಪುತ್ತಳಿಗೆ ಸಮರ್ಪಿಸುತ್ತ ದೆಹಲಿಗೆ ಕಳಿಸಿಕೊಡಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಅರುಣ್ ಕುಮಾರ್ ಎಚ್ ದೇಸಾಯಿ, ಹಾಗೂ ನಗರ ಸಭೆ ಪೌರಾಯುಕ್ತ ಮಂಜುನಾಥ್ ಗುಂಡೂರ್, ನಗರಸಭೆ ಸಿಬ್ಬಂದಿ ಕಿಶನ್, ಮಹೇಶ ,ಮೌನೇಶ್, ಎಲ್ಲಪ್ಪ, ಜಗದೀಶ್. ಇತರ ಸಿಬ್ಬಂದಿ ವರ್ಗ ಸೇರಿದಂತೆ ಇತರರು,ಇದ್ದರು.
