ಉದಯವಾಹಿನಿ ಮಸ್ಕಿ: ವಿಶ್ಯ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿ ಪಟ್ಟಣದಲ್ಲಿ ಜಂಬೂ ಸವಾರಿ ಮೆರವಣಿಗೆಯನ್ನು   ಶನಿವಾರ ಬೆಳಿಗ್ಗೆ ಅದ್ದೂರಿಯಾಗಿ ನೆರವೇರಿಸಲಾಯಿತು.
ಪಟ್ಟಣದ ಮುದಗಲ್ಲ ಕ್ರಾಸ್ ಬಳಿ ಕುಂಭಗಳಿಗೆ ಪೂಜೆ ಸಲ್ಲಿಸಿ,ಗಚ್ಚಿನಮಠದ ವರರುದ್ರಮುನಿ‌ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಅವರು ಅರಿಶಿಣ ಕುಂಕುಮದೊಂದಿಗೆ ಪುಷ್ಪರ್ಚನೆ ಮೂಲಕ ಜಂಬು ಸವಾರಿ ಮೆರವಣಿಗೆಯನ್ನು ಚಾಲನೆ ನೀಡಿದರು. ಕುಂಭ ಹೊತ್ತ ಸಾಗಿದ ನೂರಾರು ಯುವತಿಯರು, ಭ್ರಮರಾಂಭ ದೇವಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಿದ ಗಜಲಕ್ಷ್ನೀ ತಮಟೆ ಸದ್ದಿಗೆ ಹೆಜ್ಜೆ ಹಾಕಿತ್ತು, ಮೆರವಣಿಗೆಯಲ್ಲಿ ನಂದಿದ್ವಜ, ವೀರಗಾಸೆ, ಚಿಲಿಪಿಲಿ ಗೊಂಬೆ, ಡೊಳ್ಳು ಕುಣಿತ ಸೇರಿದಂತೆ ನಾನಾ ಜಾನಪದ ಕಲಾ ತಂಡಗಳು ನೋಡುಗರ ಕಣ್ಮಣ ಸೆಳೆದವು, ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆ ನಂತರ ದೇವಿ ಗುಡಿಗೆ ಆಗಮಿಸಿ, ಭ್ರಮರಾಂಭ ದೇವಿಗೆ ಕುಂಭ ಅರ್ಪಿಸಿದರು. ಭ್ರಮರಾಂಭ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಜಂಬು ಸವಾರಿ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಬಾಲಚಂದ್ರ ಡಿ ಲಕ್ಕಂ, ಪಿಎಸ್ಐ ತಾರಾಬಾಯಿ ಪವಾರ ಅವರು ಬಿಗಿ ಬಂದೋಬಸ್ತ್ ನೀಡಿದರು. ಈ ಸಂದರ್ಭದಲ್ಲಿ ‌ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ತಹಶೀಲ್ದಾರ ಅರಮನೆ ಸುಧಾ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

error: Content is protected !!