ಉದಯವಾಹಿನಿ ದೇವರಹಿಪ್ಪರಗಿ:ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಸುಜ್ಞಾನದ ಬೆಳಕು ಹರಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ತಮ್ಮ ಜ್ಞಾನದ ಮೂಲಕ ಸರ್ವರ ಮನಗೆದ್ದ ಮಹಾನ್‌ ಸಂತ ಎಂದು ತಹಶೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ನಾಡ ಹಬ್ಬಗಳ ಸಮಿತಿ ಮತ್ತು ನಾಯಕರ ಸಂಘದ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹನೀಯರ ತತ್ವ ಮತ್ತು ಆದರ್ಶಗಳನ್ನು ಪಾಲಿಸಿದರೆ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಎನ್.ಬಸವರಡ್ಡಿ ಮಾತನಾಡಿ, ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾದರಿಯಾಗಿದ್ದಾರೆ, ಮನುಕುಲದ ಉದ್ಧಾರಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡುವ ಜ್ಞಾನಿಗಳು ಮತ್ತು ಮಹಾನ್‌ ಪುರುಷರನ್ನು ಪೂಜ್ಯ ಭಾವನೆಯಿಂದ ಕಾಣುವುದರ ಜತೆಗೆ ಅವರ ಆದೇಶಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು ಎಂದರು.ಪ್ರಸ್ತಾವಿಕವಾಗಿ ಶಿರಸ್ತೆದಾರ ಸುರೇಶ ಮ್ಯಾಗೇರಿ ಮಾತನಾಡಿದರು.ಇದೇ ಸಂದರ್ಭದಲ್ಲಿ ರಮೇಶ ನಾಯ್ಕೋಡಿ, ರಾಜು ಮೇಟಗಾರ, ಪ್ರವೀಣ ನಾಯ್ಕೋಡಿ, ಸದಾಶಿವ ಕಡ್ಲೇವಾಡ, ಮಾದೇಶ ಕೂಡಗಿ, ಶಂಕರ ಜಮಾದಾರ, ಮಲ್ಲು ಉತ್ನಾಳ ಸೇರಿದಂತೆ ಸಮುದಾಯದ ಮುಖಂಡರು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!