ಉದಯವಾಹಿನಿ  ದೇವದುರ್ಗ: ಮಹರ್ಷಿ ವಾಲ್ಮೀಕಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಖುಷಿಕವಿ ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ, ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ ಗ್ರಂಥ ರಚನೆ ಮಾಡಿದ್ದು, ಜೀವನವೇ ಕಾಡಿನಲ್ಲಿ ಕಳೆದಿದ್ದಾರೆ. ಅವರು ಕಂಡರಿಸಿದ ರಾಮತತ್ವ ಎಂಬ ಧರ್ಮಸೇತು ನಮ್ಮ ದೇಶದ ಸಂಸ್ಕøತಿಯನ್ನು ರೂಪಿಸಿತು. ಇಂತಹ ಮಹನೀಯರ ತತ್ವ ಸಿದ್ದಾತಗಳನ್ನು ಪ್ರತಿಯೊಬ್ಬರು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ವಾಲ್ಮೀಕಿ ಬೆಳೆದಂತ ಒಂದು ಪರಿಹಾರ ಬೇರೆನ್ನೇಯಾಗಿತ್ತು. ಮಹರ್ಷಿ ವಾಲ್ಮೀಕಿಯ ಚರಿತ್ರೆಯೇ ಇದೆ ಎಂದರು.
ಮೆರವಣಿಗೆ: ಪಟ್ಟಣದ ಗೌರಂಪೇಟೆನಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶಾಸಕಿ ಕರೆಮ್ಮ ಗೋಪಾಲಕೃಷ್ಣ ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಗಾಂಧಿವೃತ್ತ, ಬಸವಣ್ಣ ವೃತ್ತ ಮಾರ್ಗವಾಗಿ ತಾಲೂಕ ಆಡಳಿತ ಆಯೋಜಿಸಿದ ಸಾರ್ವಜನಿಕ ಕ್ಲಬ್ ಆವರಣದವರೆಗೆ ವೇದಿಕೆ ಕಾರ್ಯಕ್ರಮದವರೆಗೆ ಅದ್ದೂರಿ ಮೆರವಣಿಗೆ ಜರುಗಿತು. ಗದಲ, ಇಲಕಲ್ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಕಲ ಪ್ರದರ್ಶನ ಸಾರ್ವಜನಿಕರ ಗಮನಸೆಳೆದವು. ಇದೇ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮಾನಶಯ್ಯ, ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಇಒ ರಾಮರೆಡ್ಡಿ ಪಾಟೀಲ್, ಪ್ರಭಾರ ಬಿಇಒ ಶಿವರಾಜ ಪೂಜಾರಿ, ರಾಘವೇಂದ್ರರಾವ್, ಹಿರಿಯ ಮೇಲ್ವಿಚಾರಕಿ ಲಕ್ಷ್ಮೀರಾಠೋಡ್ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದರು.

Leave a Reply

Your email address will not be published. Required fields are marked *

error: Content is protected !!