ಉದಯವಾಹಿನಿ ಬಂಗಾರಪೇಟೆ: ಶ್ರೀ ವಾಲ್ಮೀಕಿ ಮಹರ್ಷಿಗಳು. ಇಂದು ಅವರ ಭವನವನ್ನು ಉದ್ಘಾಟಿಸುವುದರೊಂದಿಗೆ ವಾಲ್ಮೀಕಿ ಜಯಂತಿಯ ಸಂಭ್ರಮ ಸಡಗರದಿಂದ ಆಚರಿಸುವುದು ಹೆಮ್ಮೆಯ ವಿಚಾರ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು .
ಪಟ್ಟಣದ ಕಾರಲ್ಲಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ಭವನವನ್ನು ಉದ್ಘಾಟಿಸಿ ಸ್ಥಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಪ್ಪುಗಳು ಆಕಸ್ಮಿಕವಾಗಿ ನಡೆಯುತ್ತದೆಯೇ ಹೊರತು ಉದ್ದೇಶಪೂರ್ವಕವಾಗಿ ನಡೆಯುವುದಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆ ವಾಲ್ಮೀಕಿ ಮಹರ್ಷಿ. ವಾಲ್ಮೀಕಿ ಅವರ ಮೂಲ ಹೆಸರು ರತ್ನಾಕರ ಮೂಲತಃ ಒಬ್ಬ ಕಳ್ಳನಾಗಿದ್ದು ಪ್ರಾಣಿ ಹಿಂಸೆ ಮಾಡುತ್ತಿದ್ದನ್ನು, ಒಮ್ಮೆ ನಾರದಮಹರ್ಷಿಗಳ ಕೃಪೆಯಿಂದ ಮನಪರಿವರ್ತನೆಯಾಗಿ ತನ್ನ ಹಿಂಸಾತ್ಮಕ ಮನೋಭಾವವನ್ನು ತೊರೆದು ಮಾನವನ ಅರಿಷಡ್ವರ್ಗಗಳಾದ ಕಾಮ, ಲೋಭ, ಮದ, ಮತ್ಥರ, ತ್ಯಜಿಸಿ ಸನ್ಯಾಸಿಯಾಗಿ ತಪಸ್ಸಿಗೆ ಕುಳಿತು ವಾಲ್ಮೀಕಿ ಮಹರ್ಷಿಯಾಗಿ ಪರಿವರ್ತನೆಗೊಂಡು ರಾಮಾಯಣವನ್ನು ರಚಿಸುವುದರ ಮೂಲಕ ವಿಶ್ವ ಇತಿಹಾಸ ಪುಟದಲ್ಲಿ ಅಜರಾಮರವಾಗಿ ನೆಲೆಸಿದ್ದಾರೆ.
ರಾಮಾಯಣ ಮಹಾಕಾವ್ಯದಲ್ಲಿ ಒಬ್ಬ ರಾಜನಾದವನು ಸಮಾಜಮುಖಿಯಾಗಿ ಹೇಗೆ ನಡೆದುಕೊಳ್ಳಬೇಕೆಂದು ರಾಮನ ರೂಪದಲ್ಲಿ ಚಿತ್ರಿಸಲಾಗಿದೆ, ಸಹೋದರರ ಸಂಬ0ಧ ಹಾಗೂ ಅವರ ಮೌಲ್ಯಗಳನ್ನು ಮೇಲೈಸುವ ನಿಟ್ಟಿನಲ್ಲಿ ಲಕ್ಷ್ಮಣ, ಭರತ, ಶತ್ರುಘ್ನರನ್ನು ಉದಾಹರಿಸಲಾಗಿದೆ. ಗುರು ಮತ್ತು ಶಿಷ್ಯನ ನಡುವಿನ ಅನೋನ್ಯತೆಗೆ ಹನುಮಂತನ ವ್ಯಕ್ತಿತ್ವ ಸಾಕ್ಷಿಯಾದರೆ, ಎಂತಹ ದೈವಭಕ್ತನಾದರೂ ಪರ ಸ್ತ್ರೀಯರ ವ್ಯಾಮೋಹಕ್ಕೆ ಒಳಗಾದರೆ ವಿನಾಶ ಕಟ್ಟಿಟ್ಟಬುತ್ತಿ ಎಂಬುದನ್ನು ರಾವಣನ ರೂಪದಲ್ಲಿ ಅತ್ಯಮೋಹಕವಾಗಿ ಚಿತ್ರಿಸಲಾಗಿದೆ. ಈ ಮಹಾಕಾವ್ಯದ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾನವನ ಜೀವನ ಯಶಸ್ವಿನ ಹಾದಿಯಲ್ಲಿ ಸಾಗುತ್ತದೆ.
ಕನಸಿನ ಕೂಸು ಭವನ ನಿರ್ಮಾಣ: ಕಾರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸರ್ವೇ ನಂಬರ್ ೧೯೭ರಲ್ಲಿ ಎಲ್ಲಾ ಜಾತಿ ಸಮುದಾಯಗಳಿಗೆ ಭವನಗಳನ್ನು ನಿರ್ಮಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂಬುದು ನನ್ನ ಕಣಸಾಗಿತ್ತು, ಇಂದು ಅದನ್ನು ನಾನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭವನ ನಿರ್ಮಾಣ ನಿರ್ಮಿಸಿ ಉದ್ಘಾಟಿಸಿರುವುದು ಕನಸು ನನಸಾದಂತಾಗಿದೆ.
ಈ ಸಂದರ್ಭದಲ್ಲಿ ತಹಸಿಲ್ದಾರ್ ರಶ್ಮಿ, ಇಓ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಾರೆಡ್ಡಿ, ಸಿಐ ನಂಜಪ್ಪ, ಕಾಮಸಮುದ್ರ ಎಸ್.ಐ ನಾರಾಯಣಸ್ವಾಮಿ, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ, ಬಿಇಓ ಸುಕನ್ಯ, ಸಿಡಿಪಿಓ ಮುನಿರಾಜು, ಎಇ.ಇ ರವಿ, ಕೃಷಿ ಇಲಾಖೆ ಅಧಿಕಾರಿ ಪ್ರತಿಭಾ, ಪುರಸಭೆ ಮಾಜಿ ಉಪಾಧ್ಯಕ್ಷೆ ಶಾರದಾ ವಿವೇಕಾನಂದ ಸದಸ್ಯರಾದ ರೇಣುಕಾ, ಕೆ.ಸಿ.ನಾರಾಯಣಸ್ವಾಮಿ ಇನ್ನೂ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!