ಉದಯವಾಹಿನಿ ಸಿರುಗುಪ್ಪ : ನಗರದ ತಾಲೂಕು ಕಛೇರಿ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭವನ್ನು ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಶ್ರೀ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಶ್ರೀ ಮಹರ್ಷಿ ವಾಲ್ಮೀಕಿಯವರ ಮೂಲ ಹೆಸರು ರತ್ನಾಕರವೆಂತಲೂ ಮೂಲತ: ವೃತ್ತಿಯಲ್ಲಿ ಬೇಟೆಗಾರರಾಗಿದ್ದ ಅವರು ದಿವ್ಯಶಕ್ತಿಯಿಂದ ಹಿಂದೂಧರ್ಮದ ಮಹಾನ್ ಪುರುಷ ಶ್ರೀರಾಮಚಂದ್ರನ ಜೀವನಚರಿತ್ರೆಯಾದ ರಾಮಾಯಣ ಗ್ರಂಥವನ್ನು ಬರೆದು ಅಂದಿನ ಪುರಾಣಗಳ ಪ್ರಕಾರ ಮೊದಲ ಆದಿಕವಿಯೆಂದು ಪ್ರಸಿದ್ದಿಯಾಗಿದ್ದಾರೆ.ಇಂದಿನ ದಿನಗಳಲ್ಲಿ ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ತಾಲೂಕು ಕ್ರೀಡಾಂಗಣದಿ0ದ ಆರಂಭವಾದ ಜಯಂತಿಯ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಅದ್ದೂರಿ ಮೆರವಣಿಗೆ ನಡೆಯಿತು.
ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪವನ್‌ಕುಮಾರ್.ಎಸ್.ದಂಡಪ್ಪನವರ್, ನಗರಸಭೆ ಪೌರಾಯುಕ್ತ ಗಂಗಾಧರಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಡಿವೈಎಸ್‌ಪಿ ಸಣ್ಣ ತಮ್ಮಪ್ಪಯ್ಯ ಒಡೆಯರ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಹಂಗಾಮಿ ಅಧ್ಯಕ್ಷ ಎಮ್.ಹೊನ್ನಪ್ಪ, ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ನ ಅಧ್ಯಕ್ಷ ಬಿ.ಎಮ್.ಸತೀಶ, ನಿವೃತ್ತ ಪ್ರಾಂಶುಪಾಲರಾದ ಎಮ್.ವೀರೇಶಪ್ಪ, ಬಿ.ಬಸವರಾಜ, ಹಿರಿಯ ಉಪನ್ಯಾಸಕ ವೆಂಕಟಪ್ಪ, ಹಿರಿಯ ವಕೀಲ ವೆಂಕಟೇಶ್ ನಾಯಕ, ಹಾಗೂ ನಗರಸಭೆ ಸದಸ್ಯರು, ವಾಲ್ಮೀಕಿ ಮತ್ತು ಇನ್ನಿತರ ಸಮಾಜದ ಮುಖಂಡರು ಇದ್ದರು

Leave a Reply

Your email address will not be published. Required fields are marked *

error: Content is protected !!