
ಉದಯವಾಹಿನಿ ಸಿಂಧನೂರು :ಜವಳಗೇರಾ ನಾಡಗೌಡರ ಹೆಚ್ಚುವರಿ ಭೂಮಿಯನ್ನು ಎಲ್ಲಾ ಜಾತಿಯ ಭೂಹೀನ ರೈತರಿಗೆ ಹಂಚಿಕೆಗಾಗಿ, ಸರಕಾರಿ ಸರ್ವೆ ನಂ. 419 ಹಾಗೂ 186 ರಲ್ಲಿ 30ಕ್ಕೂ ಹೆಚ್ಚು ಜನ ಅರ್ಜಿ ಹಾಕಿ ಸಾಗುವಳಿ ಮಾಡುತ್ತಿರುವ ಭೂಹೀನರಿಗೆ ಪಟ್ಟಕ್ಕಾಗಿ ಆಗ್ರಹಿಸಿ, ಸಿಪಿಐ(ಎಂಎಲ್)ರಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ(AIKKS) ತಾಲೂಕ ಸಮಿತಿ ಸಿಂಧನೂರು ನೇತೃತ್ವದಲ್ಲಿ ದಿ: 06.10.2023 ರಿಂದ ಆರಂಭವಾದ ಭೂ ಧರಣಿ 23ನೇ ದಿನದಲ್ಲಿ ಮುಂದುವರೆದ ಅನಿರ್ದಿಷ್ಟ ಹಗಲು-ರಾತ್ರಿ ಧರಣಿಗೆ ಜನಕವಿಗಳಾದಂತಹ ಸಿ.ದಾನಪ್ಪ ನಿಲೋಗಲ್ ಅವರು ಬೆಂಬಲಿಸಿ ಮಾತನಾಡಿ, ಸದರಿ ಭೂ ಹೋರಾಟವು ಮೆದಿಕಿನಾಳ, ಚಿಕ್ಕಹೆಸರೂರ, ಬಸಾಪೂರ, ಮಹ್ಮದ್ ನಗರ ದಂತಹ ಭೂ ಹೋರಾಟದ ಮುಂದುವರಿಕೆಯಾಗಿ ನಡೆದಿದೆ. ಕರ್ನಾಟಕ ಸರಕಾರ ಹೆಚ್ಚುವರಿ ಭೂಮಿಯಾಗಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಈ ಹೋರಾಟಕ್ಕೆ ಸ್ಪಂದಿಸಿ ಭೂ ಪಟ್ಟಾ ನೀಡಬೇಕು. ಭೂಹೀನರು ಸಾಗುವಳಿ ಮಾಡಲಿಕ್ಕೆ ಅವಕಾಶ ನೀಡಬೇಕು. ಭೂಮಿಗಾಗಿ ನಡೆದಿರುವ ಹೋರಾಟ ಇನ್ನೂ ಸಾವಿರಾರು ಎಕರೆ ಹೆಚ್ಚುವರಿ ಭೂಮಿಯನ್ನು ಕಾನೂನು ಕಣ್ಣಿನಿಂದ ಉಳಿಸಿಕೊಂಡ ಸರಕಾರಿ ಭೂಮಿ ದಲಿತ ಹಿಂದುಳಿದವರು ಸೇರಿದಂತೆ ಎಲ್ಲಾ ಜಾತೀಯ ಬಡವರಿಗೆ ಹಂಚಲು ರಾಯಚೂರು ಜಿಲ್ಲೆಯಾದ್ಯಂತ ಭೂ ಸಂಘರ್ಷದ ಹೋರಾಟ ವಿಸ್ತರಣೆಗೊಳ್ಳಬೇಕಾಗಿದೆ. ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನದಡಿಯಲ್ಲಿ ಭೂಹೀನರಿಗೆ ಭೂಮಿ ಹಂಚಬೇಕೆಂದರು.ಈ ಸಂದರ್ಭದಲ್ಲಿ ಎಂ.ಗಂಗಾಧರ, ಹನುಮಂತಪ್ಪ ಗೋಡ್ಯಾಳ, ಅಂಬಮ್ಮ ಬಸಾಪೂರ, ಗಂಗಮ್ಮ,ಸಂಗಮ್ಮ, ರೇಣುಕಾ, ಹಂಪಮ್ಮ, ದೇವಮ್ಮ, ಮೀನಾಕ್ಷಿ, ಜಗಧೀಶ್ವರಿ, ಯಮನಮ್ಮ, ಬಿಭೀ ಪಾತಿಮಾ, ರುಕ್ಮಿಣೆಮ್ಮ, ಚೈತ್ರಾ, ಲಕ್ಷ್ಮೀ, ತುಳಸಮ್ಮ, ಈರಮ್ಮ, ಹುಸೇನಬಾನು,ಹೆಚ್.ಆರ್.ಹೊಸಮನಿ,ಪರಶುರಾಮ, ನೇತ್ರಾವತಿ, ಲಕ್ಷ್ಮೀ ಪೂಜಾರ, ಮುದಿಯಪ್ಪ, ಮೈಬುಸಾಬ, ಅಪ್ಪಣ್ಣ, ಗಂಗಪ್ಪ, ಶಂಕ್ರಪ್ಪ, ಸೇರಿದಂತೆ ಇತರರು ಇದ್ದರು.ಮಾಬುಸಾಬ ಬೆಳ್ಳಟ್ಟಿ ತಾಲೂಕು ಕಾರ್ಯದರ್ಶಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಅಂಬಮ್ಮ ಬಸಾಪೂರ ತಾಲೂಕು ಅಧ್ಯಕ್ಷರು. ಇದ್ದರು.
