ಉದಯವಾಹಿನಿ, ಚಂಡೀಗಢ: ಪಂಜಾಬ್‌ನ ಅಮೃತಸರ ಮತ್ತು ತರನ್‌ ತಾರನ್‌ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಸಮೀಪ ನಡೆಸಿದ ಪ್ರತ್ಯೇಕ ಶೋಧ ಕಾರ್ಯಾಚರಣೆಯಲ್ಲಿ ಎರಡು ಡ್ರೋನ್‌ಗಳು ಪತ್ತೆಯಾಗಿವೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಭಾನುವಾರ ಅಮೃತಸರದ ದಾವೋಕೆ ಗ್ರಾಮದ ಸಮೀಪ ಶೋಧ ನಡೆಸಲಾಗಿತ್ತು.
ಈ ವೇಳೆ ಚೀನಾ ನಿರ್ಮಿತ ಡ್ರೋನ್‌ ಪತ್ತೆಯಾಗಿದೆ. ತರನ್‌ ತಾರನ್‌ ಜಿಲ್ಲೆಯ ಧೋಲನ್‌ ಗ್ರಾಮದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆಯೂ ಚೀನಾ ನಿರ್ಮಿತ ಡ್ರೋನ್‌ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಡ್ರೋನ್ ಮೂಲಕ ಮಾದಕವಸ್ತುಗಳನ್ನು ಸಾಗಿಸುವ ಪ್ರಯತ್ನವನ್ನು ಬಿಎಸ್‌ಎಫ್‌ ವಿಫಲಗೊಳಿಸಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!