ಉದಯವಾಹಿನಿ, ಚಂಡೀಗಢ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಚಂಡೀಗಢ ಮೂಲದ ಫಾರ್ಮಾ ಕಂಪನಿ ಪ್ಯಾರಾಬೋಲಿಕ್‌ ಡ್ರಗ್ಸ್‌ನ ಇಬ್ಬರು ಪ್ರವರ್ತಕರು ಮತ್ತು ಆ ಕಂಪನಿಯ ಲೆಕ್ಕ ಪರಿಶೋಧಕನನ್ನು (ಸಿಎ) ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿ, ಪ್ಯಾರಾಬೋಲಿಕ್ ಡ್ರಗ್ಸ್ ಪ್ರವರ್ತಕರಾದ ವಿನೀತ್ ಗುಪ್ತಾ ಮತ್ತು ಪ್ರಣವ್ ಗುಪ್ತಾ ಹಾಗೂ ಸಿಎ ಎಸ್‌.ಕೆ.
ಬನ್ಸಾಲ್‌ ಅವರನ್ನು ಸುದೀರ್ಘ ವಿಚಾರಣೆಯ ನಂತರ, ಪಂಚಕುಲದ ವಿಶೇಷ ಪಿಎಂಎಲ್‌ಎ ಕೋರ್ಟ್‌ ಆದೇಶದಂತೆ ಇ.ಡಿ ಶನಿವಾರ ತನ್ನ ವಶಕ್ಕೆ ತೆಗೆದುಕೊಂಡಿದೆ.
ದೆಹಲಿಯ ಅಶೋಕ ವಿಶ್ವವಿದ್ಯಾನಿಲಯದ ಕಾರ್ಪೊರೇಟ್ ಆಫೀಸ್‌ ಮತ್ತು ನೋಂದಾಯಿತ ಕಚೇರಿಗಳು ಮತ್ತು ಹರಿಯಾಣದ ಸೋನೆಪತ್‌ನಲ್ಲಿರುವ ಕ್ಯಾಂಪಸ್ ಸೇರಿದಂತೆ ವಿವಿಧೆಡೆ ಇ.ಡಿ ಎರಡನೇ ದಿನವೂ ತನ್ನ ಶೋಧ ಮುಂದುವರೆಸಿತು. ವಿನೀತ್ ಗುಪ್ತಾ ಮತ್ತು ಪ್ರಣವ್ ಗುಪ್ತಾ ಅವರು ಅಶೋಕ ವಿಶ್ವವಿದ್ಯಾನಿಲಯದ ಸಹ ಸಂಸ್ಥಾಪಕರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!