ಉದಯವಾಹಿನಿ, ಜೈಪುರ: ರಾಜಸ್ಥಾನದಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಸಂಗ್ರಹಿಸಿದ್ದ ನಗದು ಸೇರಿದಂತೆ ₹ 200 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಚಾರದ ವೇಳೆ ಮತದಾರರು ಅಭ್ಯರ್ಥಿಗಳಿಂದ ಪ್ರಭಾವಿತರಾಗದಂತೆ ನಿಗಾವಹಿಸುವ ಸಲುವಾಗಿ ಐಜಿಪಿ ವಿಕಾಸ್ ಕುಮಾರ್ ಅವರು 12 ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ.
₹25 ಕೋಟಿ ನಗದು, ₹20 ಕೋಟಿ ಮೌಲ್ಯದ ಮದ್ಯ, ₹20 ಕೋಟಿ ಮೌಲ್ಯದ ಆಭರಣ ಮತ್ತು ಚಿನ್ನ ಸೇರಿದಂತೆ ₹214 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಪಿಎಸ್ ಅಧಿಕಾರಿ ಕುಮಾರ್ ಹೇಳಿದ್ದಾರೆ.
