ಉದಯವಾಹಿನಿ ದೇವದುರ್ಗ: ಹಲವು ಗ್ರಾಮಗಳಲ್ಲಿ ಖಾಲಿಯಿರುವಂತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳು ಭರ್ತಿ ಮಾಡುವಂತೆ ಶೃತಿ ಸಂಸ್ಕøತಿ ಸಂಸ್ಥೆ ತಾಲೂಕ ಸಮಿತಿ ಪದಾಧಿಕಾರಿಗಳು ಹಿರಿಯ ಮೇಲ್ವಿಚಾರಕಿ ಗಂಗಮ್ಮ ಅವರಿಗೆ ಮನವಿ ಸಲ್ಲಿಸಿದರು. ಶಿವಂಗಿ, ಜೇರದಬಂಡಿ, ಮೂಷ್ಠರೂ ಸೇರಿದಂತೆ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕು. ಜೇರದಬಂಡಿ, ಗೆಜ್ಜೆಭಾವಿ ಸಹಾಯಕಿಯರ ಹುದ್ದೆ ಭರ್ತಿ ಮಾಡಬೇಕು. ಶಿವಂಗಿ ಹಾಳ ಜಾಡಲದಿನ್ನಿ ಕೇಂದ್ರಕ್ಕೆ ಕಾರ್ಯಕರ್ತೆಯರನ್ನು ನೇಮಕ ಮಾಡಬೇಕು. ಹೊಸ ಶಾಖಾಪೂರು, ಮೂಷ್ಟೂರು, ಜೇರದಬಂಡಿ, ಹಂಪಯ್ಯದೊಡ್ಡಿಗೆ ಹೆಚ್ಚುವರಿ ಕೇಂದ್ರಗಳು ಮಂಜೂರು ಮಾಡಬೇಕು. ನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆರ ಹಾಗೂ ಸಹಾಯಕಿರಿಗೆ ಕೂಡಲೇ ಇಡಿಗಂಟು ನೀಡಬೇಕು. ಹಲವು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಂತಹ ಕೇಂದ್ರಗಳಿಗೆ ಸೌಲಭ್ಯ ಕಲ್ಪಿಸಬೇಕು. ಹಲವು ಅಂಗನವಾಡಿ ಸಮಸ್ಯೆಗಳು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿವರೆಗೆ ಅಧಿಕಾರಿಗಳು ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಇನ್ನಾದರೂ ಸಂಬಂಧಪಟ್ಟಂತ ಅಧಿಕಾರಿಗಳು ಕೂಡಲೇ ಸೌಲಭ್ಯ ಕಲ್ಪಿಸುವ ಕಡೆ ಗಮನಹರಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ತಾಲೂಕ ಸಂಯೋಜಕ ರಾಮಣ್ಣ ಎನ್.ಗಣೇಕಲ್, ತಾಲೂಕ ಸಂಯೋಜಕಿ ಈರಲತಾ ಸೇರಿ ಇತರರು ಇದ್ದರು.
