ಉದಯವಾಹಿನಿ, ಬಂಗಾರಪೇಟೆ: ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಸದೃಢ ಭಾರತ ನಿರ್ಮಾಣಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ ರವರು ರಾಜಕೀಯ ಪರಿಪಕ್ವತೆ ಮತ್ತು ಪರ್ಯಾಯ ರಾಜಕೀಯ ಚಿಂತನೆಗಳ ಹೋರಾಟದ ಮೂಲಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷವನ್ನು ಸ್ಥಾಪಿಸಿದರು ಎಂದು ಜಿಲ್ಲಾಧ್ಯಕ್ಷ ಗುಟ್ಟಹಳ್ಳಿ ಶ್ರೀನಿವಾಸ್ ತಿಳಿಸಿದರು.ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕೋಲಾರ ಜಿಲ್ಲಾ ಘಟಕದ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಎಂ. ವೆಂಕಟಸ್ವಾಮಿ ನೇತೃತ್ವದ ಸಮತ ಸೈನಿಕ್ ದಳವು ಆರ್. ಪಿ. ಐ ಪಕ್ಷದ ಅವಿಭಾಜ್ಯ ಅಂಗವಾಗಿ ರಾಜಕೀಯವಾಗಿ ಮುನ್ನಲೆಗೆ ಬರಬೇಕು ಎಂಬ ಸದುದ್ದೇಶದಿಂದ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ನಡೆಸಿಕೊಳ್ಳಲು ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳನ್ನು ರಾಜ್ಯಾದ್ಯಂತ ಕೈಗೊಳ್ಳಲು ದಿನಾಂಕ 3.11. 2023 ರಂದು ಕೋಲಾರದ ಪತ್ರಕರ್ತರ ಭವನದಲ್ಲಿ ರಾಷ್ಟ್ರೀಯ ನಾಯಕರ ಸಮಕ್ಷಮದಲ್ಲಿ ಸಭೆ ಕರೆಯಲಾಗಿದೆ, ಎಲ್ಲಾ ಸದಸ್ಯರು ಹಾಗೂ ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಇಚ್ಚಿಸುವ ಸರ್ವರೂ ಆಗಮಿಸಬೇಕು ಎಂದು ಮನವಿ ಮಾಡಿದರು.

ಹೊಸ ರಾಜಕೀಯ ಮನ್ವಂತರಕ್ಕೆ ವೇದಿಕೆ
ದೇಶದಲ್ಲಿ ಕೋಮುವಾದ, ನಿರುದ್ಯೋಗ, ಭ್ರಷ್ಟಾಚಾರ
ಸಮಸ್ಯೆಗಳು ತಾಂಡವಾಡುತ್ತಿದೆ ಬಡವರು ಬಡವರಾಗಿ ಸೌಲಭ್ಯ ವಂಚಿತರಾಗಿ ಜೀವಿಸುವಂತಾಗಿದೆ ಇಂತಹ ಅನಿಷ್ಟ ಧೋರಣೆಗಳನ್ನು ಒಡೆದೋಡಿಸಲು ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯಗಳಂತೆ ನಿದ್ರಾಹೀನ ಸ್ಥಿತಿಯಲ್ಲಿರುವ ಯುವ ಸಮುದಾಯವನ್ನು ಬಡದೆಬ್ಬಿಸುವ ಮೂಲಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹೋರಾಟದ ಹಾದಿಯಲ್ಲಿ ಹೊಸ ರಾಜಕೀಯ ಮನ್ವಂತರಕ್ಕೆ ವೇದಿಕೆ ಸಿದ್ದಪಡಿಸಿ ಅಧಿಕಾರದ ಗದ್ದುಗೆ ಹಿಡಿಯುವ ಮಹತ್ಕಾಂಕ್ಷೆ ಹೊಂದಿದ್ದು ಸರ್ವರಿಗೂ ನ್ಯಾಯ ಒದಿಗಿಸಲು ಬದ್ಧವಾಗಿದೆ ಎಂದು ತಿಳಿಸಿದರು.

ದಲಿತ ಮತ್ತು ಮುಸ್ಲಿಮರು ಐಕ್ಯತೆಯಿಂದ ದೇಶದ ಅಧಿಕಾರದ ಚುಕ್ಕಾಣಿ
ಈ ದೇಶದ ಮೂಲ ನಿವಾಸಿಗಳಾದ ದಲಿತರ ಜೊತೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಕೈಜೋಡಿಸಿದ್ದೇ ಆದಲ್ಲಿ ಮುಂದಿನ ದಿನಮಾನಗಳಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಹಾಗೂ ಕಾರ್ಯಕರ್ತರು ಯಾವುದೇ ಸ್ಥಳೀಯ ನಾಯಕರುಗಳ ದೌರ್ಜನ್ಯ, ದಬ್ಬಾಳಿಕೆಗೆ ಬೆದರದೆ, ಬೆಚ್ಚದೆ, ಇರ್ದಡೆ, ಸ್ಥಳೀಯರ ಸಮಸ್ಯೆಗಳನ್ನು ನಿವಾರಿಸಬಹುದು ನಿಮ್ಮ ಬೆನ್ನಿಗೆ ನಾವಿದ್ದೇವೆ ಎಂದು ರಾಜ್ಯ ಮುಖಂಡ ವಕೀಲರಾದ ಬದ್ರಿನಾರಾಯಣ್ ತಿಳಿಸಿದರು.ಈ ಸಭೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ವಿಜಿ, ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷದ ರಾಜ್ಯ ಉಪಾಧ್ಯಕ್ಷ ರವೀಂದ್ರ, ರಾಜ್ಯ ಮುಖಂಡ ಶ್ರೀನಿವಾಸ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!