ಉದಯವಾಹಿನಿ ಸಿಂಧನೂರು :  ಮಹರ್ಷಿ ವಾಲ್ಮೀಕಿ ಕುರಿತು ಸಂಸ್ಕೃತದಲ್ಲಿ ಒಂದು ಪದ್ಯ ಬರುತ್ತದೆ ಪೂಜೆತ್ಸೋಂ ರಾಮ ರಾಮ ಮಧುರ ಮಧುರ ಆಚಾರ್ಯಂ ಮತ್ತು ಆದಿತ್ಯ ಕವಿತಸ್ಯಾಕಂ ಒಂದೇ ವಾಲ್ಮೀಕಿ ಕೋಟೆಂ ಕಾವ್ಯದ ಒಂದು ವೃಕ್ಷದ ಮೇಲೆ ಕುಳಿತು ರಾಮ ರಾಮ ಅಂತ ಜಪಮಾಡುತ್ತಿರವಾಗ ವಾಲ್ಮೀಕಿ ಕೋಟೆಗೆ ನನ್ನ ವಂದನೆಗಳು ಎಂದು ಕವಿ ಹೇಳುತ್ತಾನೆ. ಅಂತಹ ರಾಮನನ್ನೇ ಪುರುಷೋತ್ತಮನ ಕುರಿತು ರಾಮಾಯಣ ಬರೆದಂತ ಭಾರತ ಮಾಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಮಹಿಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು
ಮತ್ತು ಅವರು ಆದರ್ಶ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸೋಣ. ಈ ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು ತಿಳಿಸುತ್ತಾ ತಾಲ್ಲೂಕು ತಹಶೀಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಅವರ ಮಾತನಾಡಿದರು.ನಗರದ ಮಿನಿ ವಿಧಾನಸೌಧ ತಾಲ್ಲೂಕು ಆಡಳಿತ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಕೆ ಕರಿಯಪ್ಪ ಇಂತಹ ಮಹಾಪುರುಷರು ರಾಮಾಯಣ ಗ್ರಂಥಗಳನ್ನು ಬರೆದಿದ್ದಾರೆ ಎಂದರೆ ಎಲ್ಲರೂ ಯುವಕರು ಅರ್ಥಮಾಡಿಕೊಳ್ಳಬೇಕು ಮತ್ತು ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ಕೆಲಸ ನಮ್ಮದಾಗಬೇಕೆಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಜಯಂತಿ ಕುರಿತು ಮಾತನಾಡಿದ ನಗರ ಸಭೆ ಪೌರಾಯುಕ್ತರು ಮಂಜುನಾಥ್ ಗುಂಡೂರು ಅವರು ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಅರ್ಥೈಸಿ ಪೂಜೆ ಮಾಡುತ್ತಿರುವುದು. ವಾಲ್ಮೀಕಿ ಎಂದರೆ ಪ್ರೀತಿ ವಿಶ್ವಾಸ ಸ್ವಭಾವ ಶ್ರೇಷ್ಠ ಸ್ವಭಾವ ಇವತ್ತು ಯಾರಾದರೂ ಅಣ್ಣ ತಮ್ಮ ಚೆನ್ನಾಗಿ ಇದ್ದರೆ ರಾಮ ಲಕ್ಷ್ಮಣತರ ಇದ್ದಾರೆ. ಅರ್ಥ ವಾಲ್ಮೀಕಿ ಅವರ ಸ್ವಭಾವ ಶ್ರೇಷ್ಠವಾದದ್ದು ಎಂದು. 

ಈ ಸಂದರ್ಭದಲ್ಲಿ. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್ ದೊಡ್ಡ ಬಸವರಾಜ.ಪಂಪನಗೌಡ ಬಾದರ್ಲಿ. ತಾಲೂಕು ವಾಲ್ಮೀಕಿ ಸಮುದಾಯದ ಅಧ್ಯಕ್ಷರ ಆರ್ ತಿಮ್ಮಯ್ಯ ನಾಯಕ್ . ಉಪಾಧ್ಯಕ್ಷ ಓಬಳೇಶ್ ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ. ಶಿವನಗೌಡ ಗೊರಬಾಳ ಹನುಮಂತಪ್ಪ ಗೋಮರ್ಷಿ ವಿಶ್ವನಾಥ ನಾಯಕ್ ಗೋನವಾರ ಮತ್ತು ವಾಲ್ಮೀಕಿ ಸಮುದಾಯದ ಹಿರಿಯ ಮತ್ತು ಮುಖಂಡರು ಇತರರು ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!