ಉದಯವಾಹಿನಿ, ಇಸ್ಲಾಮಾಬಾದ್: ಗಡಿಯಾಚೆಗಿನ ಪ್ರೇಮಕಥೆಯ ನಾಯಕಿ ಅಂಜು ತನ್ನ ಪತಿ ಮತ್ತು ಮಕ್ಕಳನ್ನು ತೊರೆದು ತನ್ನ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ವಿಷಯ ಎಲ್ಲರಿಗೂ ಗೊತ್ತಿರುವುದು. ಆದರೆ ಅಂಜು ಈಗ ತನ್ನ ಮಕ್ಕಳನ್ನು ನೋಡಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾಳೆ.
ಈ ಬಗ್ಗೆ ಪಾಕಿಸ್ತಾನದ ಅಂಜು ಪತಿ ನುಸ್ರುಲ್ಲಾ ಮಾತನಾಡಿದ್ದಾರೆ. ತನ್ನ ಮಕ್ಕಳನ್ನು ಭೇಟಿಯಾಗಲು ಭಾರತಕ್ಕೆ ಹೋಗಲು ಕಾಯುತ್ತಿದ್ದೇನೆ ಎಂದು ಅಂಜು ಹೇಳಿದ್ದಾಳೆ ಎಂದು ತಿಳಿಸಿದ್ದಾರೆ. ಅಂಜು ಪ್ರತಿದಿನ ತನ್ನ ಇಬ್ಬರು ಮಕ್ಕಳನ್ನು ನೆನೆದು ಮಾನಸಿಕವಾಗಿ ಕುಗ್ಗುತ್ತಿದ್ದಾಳೆ. ಹಾಗಾಗಿ ಭಾರತಕ್ಕೆ ಹೋಗಿ ಮಕ್ಕಳನ್ನು ಭೇಟಿಯಾಗಬೇಕು ಎಂದು ಹಠ ಹಿಡಿದಿದ್ದಾಳೆ. ಆ ಕಾರಣಕ್ಕೆ ನಿರಾಕ್ಷೇಪಣಾ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ.

Leave a Reply

Your email address will not be published. Required fields are marked *

error: Content is protected !!