
ಉದಯವಾಹಿನಿ, ಸಿಂಧನೂರು: ಅಕ್ಷರದಾಸೋಹ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಬೇಡಿಕೆ ಈಡೇರಿಸಲು ಒತ್ತಾಯಿಸಿ ದಿನಾಂಕ ನವೆಂಬರ್ 2 ರಂದು ಬಂದ್ ಮಾಡಲಾಗುತ್ತದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಬಿಸಿ ಊಟ ಯೋಜನೆ ನಿರ್ದೇಶಕರಾದ ಸಾಬಣ್ಣ ವಗ್ಗರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.ನಂತರ ಮಾತನಾಡಿದ, ಅಕ್ಷರ ದಾಸೋಹ ಬಿಸಿಯೂಟ ನೌಕರರು ಸಂಘದ ಜಿಲ್ಲಾಧ್ಯಕ್ಷರಾದ ವಿಶಾಲಾಕ್ಷಿ ಅವರು ಸುಮಾರು ವರ್ಷಗಳಿಂದ ನಮ್ಮ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸಿಲು ಒತ್ತಾಯಿಸಿ ಹಲವಾರು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಬೇಡಿಕೆಗಳು ಈಡೇರಿರುವುದಿಲ್ಲ.ಆದ್ದರಿಂದ ಅಕ್ಷರದಾಸೋಹ ಅಸಿಯೂಟ ನೌಕರರ ಸಂಘದ ರಾಜ್ಯ ಸಮಿತಿ ಕರೆಯ ಮೇರೆಗೆ ದಿನಾಂಕ:-02-11-2023 ರಂದು “ಅಸಿಯೂಟ ಬಂದ್” ಮಾಡಿ ಬೆಂಗಳೂರಿನಲ್ಲಿ ನಡೆಯುವ “ಧರಣಿ ಸತ್ಯಾಗ್ರಹ”ದಲ್ಲಿ ಭಾಗವಹಿಸಲು ಅಸಿಯೂಟ ನೌಕರರ ಸಂಘದ ತಾಲೂಕಾ ಸಮಿತಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ. ತಾಲ್ಲೂಕು ಅಧ್ಯಕ್ಷರು ಶರಣಮ್ಮ ಪಾಟೀಲ್. ಶರಣಮ್ಮ.ಜಿ.ವಿರುಪಾಕ್ಷಮ್ಮ. ಮಲ್ಲಮ್ಮ ಗಿಣಿವಾರ. ಶ್ರೀ ದೇವಿ ಸುಕಾಲಪೇಟೆ.ಅಂಜಿನಮ್ಮಬೂದಿವಾಳ.ದೇವಮ್ಮ. ಸರಸ್ವತಿ. ಹನುಮ್ಮ. ಪುಷ್ಪಾ ಸೇರಿದಂತೆ ಇತರರು ಭಾಗವಹಿಸಿದ್ದರು.
*ಬೇಡಿಕೆಗಳು*
01. ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಗೆ ನೀಡಬೇಕು.
02. ಸಾದಿಲ್ವಾರು ಅಂಟಖಾಸ ಜವಾಬ್ದಾರಿಯನ್ನು ಮೊದಲನಂತೆ ನಿರ್ವಹಣೆಗೆ ಆದೇಶಿಸಬೇಕು.
03, 2022 ರಿಂದ 60 ವರ್ಷ ವಯೋಮಾನದವರಿಗೆ ನಿವೃತ್ತಿ ಮಾಡಿದ್ದು, ನಿವೃತ್ತಿಯಾದ ಎಲ್ಲಾ ನೌಕರರಿಗೆ 1 ಲಕ್ಷ ಇಡುಗಂಟು ನೀಡಬೇಕು ಹಾಗೂ ಮುಂದೆ ನಿವೃತ್ತಿಯಾಗುವುವವರಿಗೆ 1 ಲಕ್ಷ ಇಡುಗಂಟು ನೀಡುವಂತೆ ಸರಕಾರ ಆದೇಶಿಸಬೇಕು.
04. ಕೆಲಸದ ಅವಧಿಯಲ್ಲಿ ಮರಣ ಹೊಂದಿದರೆ 25 ಲಕ್ಷ ರೂ ಪರಿಹಾರ ನೀಡಬೇಕು.
05. 31 ಮಾರ್ಚೆ 2023 ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸುವ ಆದೇಶ ಬದಲಾಯಿಸಿ 10 ಏಪ್ರಿಲ್ 2023 ಕ್ಕೆ ಮರು ಆದೇಶಿಸಬೇಕು.
06. ಈ ಹಿಂದೆ ಬಜೆಟ್‌ನಲ್ಲಿ ಹೆಚ್ಚು ಮಾಡಿದ 1000 ರೂ. ಗೌರವಧನವನ್ನು ಜನೇವರಿ 2023 ರಿಂದಲೇ ಜಾರಿ ಮಾಡಿ ಬಾಕಿ ಹೆಚ್ಚುವರಿ ಗೌರವಧನ ನೀಡಬೇಕು.
