
ಉದಯವಾಹಿನಿ, ಸಿಂಧನೂರು: ಹೂಗಾರ ಸಮಾಜದ ತಾಲ್ಲೂಕು ವತಿಯಿಂದ ಬಸವಾದಿ ಶರಣರು ಹೂಗಾರ ಮಾದಯ್ಯನವರು ಭಾವಚಿತ್ರದೊಂದಿಗೆ ನಗರದ ಪ್ರವಾಸಿ ಮಂದಿರದಿಂದ ಟೌನ್ ಹಾಲ್ ವರಿಗೆ ವಿಜ್ರಂಭಣೆಯಿಂದ ಮೆರವಣಿಗೆ ನಡೆಯಿತು.ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಅವರು ಶರಣರ ಮಾದಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು ಆಗಿನ ಕಾಲದಲ್ಲಿ ಬಸವಣ್ಣನವರ ಸಮಾಕಾಲನರಳಲ್ಲಿ ಶರಣ ಮಾದಯ್ಯ ನವರ ಒಬ್ಬರು ಏಕೆಂ
ದರೆ. ತಮ್ಮದೇ ಶೈಲಿಯಲ್ಲಿ ವೃತಗೈಯತಾ ಸಮಾಜಕ್ಕಾಗಿ ಸಾಕಷ್ಟು ಒಳ್ಳೆಯ ಸಂದೇಶವನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಈ ಸಂದರ್ಭದಲ್ಲಿ. ಸಂಸದರಾದ ಸಂಗಣ್ಣ ಕರಡಿ ಅವರು ಹೂಗಾರ ಸಮಾಜ ಒಂದು ಅರಳಿದ ಹೂವಿನಂತೆ ಮೃದುವಾದ ಮತ್ತು ಸ್ವಚ್ಛವಾದ ಮನಸು ಉಳ್ಳವರು . ತಾವು ಇದ್ದುಕಡಗೆ ಉತ್ತಮವಾದ ಎಲ್ಲರಿಗೂ ಒಳ್ಳೆ ವಾತಾವರಣ ನಿರ್ಮಾಣವಾಗಲಿ ಎಂದು ಬಯಸುವಂತಹ ಯಾವುದಾದರೂ ಸಮಾಜ ಇದ್ದರೆ ಅದು ಹೂಗಾರ ಸಮಾಜ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಮ್ಮ ಸಮಾಜದ ಬಂಧುಗಳು ಸ್ವಾಭಿಮಾನ ಮೂಲಕ ವಿಶೇಷವಾಗಿ ವೈದ್ಯ ಮತ್ತು ಕಂದಾಯ ವೃತ್ತಿ ಪೊಲೀಸ್ ಇಲಾಖೆ ಸೇರಿದಂತೆ ಇತರರು ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗುರು ರಾಜೇಂದ್ರ ಶಿವಯೋಗಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಹೂಗಾರ ಶಕ್ತಿಪೀಠ ನದಿಸಿನ್ನೂರು. ಸೋಮನಾಥ ಶಿವಾಚಾರ್ಯರು.ಕರಿಬಸವನಗರ.
ವೆಂಕಟಗಿರಿ ಕ್ಯಾಂಪ್ ನ ಡಾ. ಸಿದ್ದ ರಾಮೇಶ್ವರ ದಿವ್ಯ ಸಾನಿಧ್ಯವಹಿಸಿದರು.ಕೆ.ಒ.ಎಫ್ . ರಾಜ್ಯ ಅಧ್ಯಕ್ಷರಾದ ವೆಂಕಟರಾವ್ ನಾಡಗೌಡ.ಆರ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಸೋಮನಗೌಡ ಬಾದರ್ಲಿ.ಬಸವರಾಜ.ಲಿಂಗರಾಜ.
ರಾಜೇಶ್ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
