ಉದಯವಾಹಿನಿ, ಬಂಗಾರಪೇಟೆ: ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಮೂಲಕ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಮಾಡುವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಎಸ್, ಕೆ,ಜಯಣ್ಣ ತಿಳಿಸಿದರು. ತಾಲ್ಲೂಕಿನ ಕಾಮಸಮುದ್ರ ಹೋಬಳಿಗೆ ಸೇರಿದ ದೋಣಿ ಮಡಗು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯನ್ನುಮಂಜುಳ ಜಯಣ್ಣ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು ಈ ಸಭೆಯಲ್ಲಿ ಅಧ್ಯಕ್ಷರು ಮಾತನಾಡಿ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆಗೆ ಇಂದಿನ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದೇವೆ ಹಾಗೂ ವಾರ್ಡ್ ಸಭೆ ಕರೆಯುವ ದಿನಾಂಕವನ್ನು ನಿಗದಿಪಡಿಸಲಾಗಿದೆ, ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳ ರಚನೆ ಮಾಡಲು ಸಭೆಯ ಒಪ್ಪಿಗೆ ಪಡೆಯಲಾಗಿದೆ, ಮತ್ತು ಇ. ಸ್ವತ್ತು ಖಾತೆಗಳು ಹಾಗು ಲೈಸನ್ಸ್ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು, ಪಂಚತಂತ್ರ 2.0 ಮುಖಾಂತರ ಕಂದಾಯ ವಸೂಲಾತಿಯ ಬಗ್ಗೆ ಚರ್ಚಿಸಲಾಗಿದೆ ಮತ್ತು ಎನ್ ಆರ್ ಜಿ ಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು, ಸ್ವಚ್ಛತೆ ಬಗ್ಗೆ ಗಮನಹರಿಸಲಾಗುವುದು, ಸಿಬ್ಬಂದಿಯ ಸಂಬಳ, ವಿದ್ಯುತ್ ಬಿಲ್ಲು ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ 15ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಗೆ ಶೇ% 50ರಷ್ಟು ಹಣ ಮೀಸಲಿಡಲಾಗಿದೆ, ಪೈಪ್ ಲೈನ್ ಅಳವಡಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಹಾಗು ಕೆ. ಡಿ.ಪಿ. ಸಭೆಯನ್ನು ಸಹ ಕರೆಯಲಾಗುವುದು ಒಟ್ಟಾರೆಯಾಗಿ ಇತರೆ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಗ್ರಾಮದ ಅಭಿವೃದ್ಧಿಗೆ ಸಭೆಯ ಒಪ್ಪಿಗೆ ಪಡೆಯಲಾಗಿದೆ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಾಗರತ್ನಮ್ಮ, ಸದಸ್ಯರಾದ ವೆಂಕಟಲಕ್ಷ್ಮಮ್ಮ ತಿಮ್ಮಪ್ಪ, ಪ್ರಿಯಾ ಜೆ. ಅಮರಮ್ಮ, ಎಂ.ವಿ. ಸಂತೋಷ್, ಆರ್. ವಸಂತ್, ಎಂ.ಟಿ. ರಾಜಪ್ಪ, ಬಿ.ವಿ. ರಾಧ ವೆಂಕಟೇಶ್, ಬಸಪ್ಪ, ವಸಂತಮ್ಮ ಬತ್ತಪ್ಪ, ಚಂಗಲ ರಾಯರೆಡ್ಡಿ, ನಾಗಲಮುದ್ದಮ್ಮ, ಕೃಷ್ಣಪ್ಪ, ನಾರಾಯಣಸ್ವಾಮಿ, ಶ್ರೀರಾಮ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ವಿ. ವಸಂತ್ ಕುಮಾರ್, ಸಿಬ್ಬಂದಿ ವರ್ಗದವರಾದ ಸೀನಪ್ಪ, ನಾರಾಯಣಸ್ವಾಮಿ, ಸುಬ್ರಮಣಿ, ರಾಧಾಕೃಷ್ಣ, ಮಧುಶೇಕರ್, ಚಿನ್ನಪ್ಪಯ್ಯ, ಚಂದ್ರಪ್ಪ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!