
ಉದಯವಾಹಿನಿ,ಇಂಡಿ: ತಾಲ್ಲೂಕಿನ ಹಳಗುಣಕಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ನೂತನ ಪ್ರತಿಮೆ ಅನಾವರಣ ಸಮಾರಂಭ ಸೋಮವಾರ ಜರುಗಿತು ಕಾರ್ಯಕ್ರಮದ ಸಾನ್ನಿಧ್ಯವನ್ನು ಬುದ್ಧವಿಹಾರದ ಬಂತೆ ಸಘಪಾಲ ವಹಿಸಿದ್ದರು ಪ್ರತಿಮೆ ಲೋಕಾರ್ಪಣೆಯನ್ನು ಕರ್ನಾಟಕ ಘನ ಸರ್ಕಾರದ ಸಮಾಜ ಕಲ್ಯಾಣ ಸಚಿವರಾದ ಶ್ರೀಯುತ ಎಚ್ಮ.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಶ್ರೀಯುತ ಶ್ರೀ.ಸತೀಶ ಜಾರಕಿಹೊಳಿ ಕಾರ್ಯಕ್ರಮದ ಅಧ್ಯಕ್ಷರು ಜನಪ್ರಿಯ ಶಾಸಕರಾದ ಶ್ರೀ ಯಶವಂತರಾಯಗೌಡ.ವಿ.ಪಾಟೀಲ ಅವರ ಅಮೃತ ಹಸ್ತದಿಂದ ನೆರವೇರಿತು.ಈ ವೇಳೆ ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ಮಾಜಿ ಶಾಸಕರಾದ ರಾಜು ಆಲಗೋರ, ಸಾಮಾಜಿಕ ಹೋರಟಗಾರ್ತಿ ಅಕ್ಷತಾ ಕೆ ಸಿ, ಮಹಿಳಾ ಮುಖಂಡರುಗಳಾದ ಕಾಂತಾ ನಾಯ್ಕ, ಶ್ರೀದೇವಿ ಉತ್ಲಾಸರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ ಮೋಮಿನ, ಸುರೇಶ ಗೋಣಸಗಿ, ಎಂ ಆರ್ ಪಾಟೀಲ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.
