ಉದಯವಾಹಿನಿ,ಇಂಡಿ :ತಾಲೂಕಿನ ಹೊರ್ತಿ ಗ್ರಾಮದಲ್ಲಿ ದಿನಾಂಕ 30/10/2023 ರಂದು ಎಮ್ ಎಮ್ ಡಪ್ಪಿನ  ಸಿ. ಪಿ. ಐ ಹಾಗೂ ಆಹಾರ ನೀರಕ್ಷಕರ ಪರಮಾನಂದ ಹೂಗಾರ  ನೇತೃತ್ವದಲ್ಲಿ ಅಕ್ರಮ ಅಕ್ಕಿ ರೈಡ್ ಮಾಡಲಾಯಿತು. ಹೋರ್ತಿ ಗ್ರಾಮದ ಮುರಾರ್ಜಿ ಶಾಲೆಯ ಸಮೀಪ ಇರುವ ತಾಂಡೆ ನಂಬರ 01 ರ ನಾರಾಯಣ  ಮಾನಸಿಂಗ ನಾಯಕ ಇವರ ತೋಟದವಸ್ತಿಯ ಪತ್ರದ ಶೆಡ್ಡಿನಲ್ಲಿ ಮಂಜುನಾಥ  ‘ರೂಪಣ್ಣ ಅಳೋಳ್ಳಿ  ಈತನು ಸರಕಾರದಿಂದ ನಾಗರಿಕರಿಗೆ ಪೂರೈಕೆಯಾಗುವ ಪಡಿತರ ಅಕ್ಕಿಯನ್ನು ಅಕ್ರಮ ಮಾರಾಟ  ಮಾಡುತ್ತಿರುತಾನೇ  ಯಾವುದೇ ದಾಖಲಾತಿ ಇಲ್ಲದೇ ಸಂಗ್ರಹಿಸಿಟ್ಟುಕೊಂಡ ಮಂಜುನಾಥ ರೂಪಣ್ಣ ಅಳೋಳ್ಳಿ , ಹೋರ್ತಿ ತಾ || ಇಂಡಿ ಈತನು ಬೇಕಾಯ್ದೆಶೀರ ರೀತಿಯಿಂದ ತನ್ನ ಸ್ವಂತ ಪಾಯ್ದಗೋಸ್ಕರ ಯಾವುದೇ ದಾಖಲಾತಿ ಇಲ್ಲದೇ ಸರಕಾರದಿಂದ ನಾಗರಿಕರಿಗೆ ಪೂರೈಕಾಗುವ, 11.858/-ರೂ ಕಿಮ್ಮತ್ತಿನ 539 ಕೆಜಿ ತೂಕದ ಪಡಿತರ ಅಕ್ಕಿಯನ್ನು ಅನಧೀಕೃತವಾಗಿ ಆರೋಪಿತನಾದ : ಸಂಜು ಝಳಕಿ ಈತನಿಗೆ ಹಣ ಕೊಟ್ಟು ಸಂಗ್ರಹಿಸಿಕೊಂಡಿದ್ದಲ್ಲದೇ ಅನಧೀಕೃತವಾಗಿ ಸಂಗ್ರಹಿಸಿದ ಪಡಿತರ ಅಕ್ಕಿಯನ್ನು . ಸಾ|| ವಿಜಯಪುರ  ರಾಹುಲ ಪವಾರ ಈತನಿಗೆ ಸಾಗಾಟ ಮಾಡುತ್ತಿರುತಾನೆ. ಖಚಿತ ಮಾಹಿತಿಮೇರೆಗೆ. ಸಿ. ಪಿ. ಐ. ಹಾಗೂ ಆಹಾರ ನೀರಕ್ಷಕರಾದ ಪರಮಾನಂದ ಹೂಗಾರ್ ಹಾಗೂ ಪೋಲಿಸ್ ಸಿಬಂದಿಗಳು ದಾಳಿಯಲಿ ಭಾಗಿಯಾಗಿದರು

Leave a Reply

Your email address will not be published. Required fields are marked *

error: Content is protected !!