ಉದಯವಾಹಿನಿ,ಚಿಂಚೋಳಿ: ಪಟ್ಟಣದ ಚಂದಾಪೂರದಲ್ಲಿ ಬಂಜಾರಾ ಸಮಾಜದ ಅರಾಧ್ಯಧೈವ ದಿ.ರಾಮರಾವ್ ಮಹಾರಾಜರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರವಿರುವ ನಾಮಫಲಕಕ್ಕೆ ಬಂಜಾರಾ ಸಮಾಜದ ಮುಖಂಡರ ನೇತೃತ್ವದಲ್ಲಿ ಪುಷ್ಪಮಾಲಾ ಅರ್ಪಿಸುವುದರ ಮೂಲಕ ಪುಣ್ಯಸ್ಮರಣೆ ಆಚರಿಸಲಾಯಿತು.ಪುರಸಭೆ ಮಾಜಿ ಉಪಾಧ್ಯಕ್ಷ ರಾಜು ಪವ್ಹಾರ ಮಾತನಾಡಿ ದಿ.ರಾಮರಾವ್ ಮಹಾರಾಜರು ಸಮಾಜ ಸುಧಾರಕರಾಗಿದ್ದು,ಸಮಾಜ ಸುಧಾರಣೆಗಾಗಿ ತಮ್ಮ ಜೀವನವೇ ಮುಡಿಪಾಗಿಟ್ಟರು,ಬೇಡದ ಸಂಪ್ರದಾಯ ಆಚರಣೆ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶಕ್ತಿಮೀರಿ ಪ್ರಯತ್ನಿಸಿದರು.
ರಾಮರಾವ ಮಹಾರಾಜರು ತಮ್ಮ ಇಡೀ ಜೀವನವನ್ನು ಬಂಜಾರ ಸಮುದಾಯದ ಉನ್ನತಿಗಾಗಿ ಮುಡಿಪಾಗಿಟ್ಟಿ,ಇಡೀ ಬಂಜಾರ ಸಮುದಾಯಕ್ಕೆ ಶಕ್ತಿಯ ಮೂಲವಾಗಿದ್ದ ಡಾ.ರಾಮರಾವ್ ಬಾಪು ಮಹಾರಾಜ ಅವರ ದುಃಖದ ನಿಧನವು ಬಂಜಾರ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ತುಂಬಲಾರದ ನಷ್ಟವಾಗಿದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡ ಭೀಮಶೇಟ್ಟಿ ಮುರಡಾ, ಕೆಎಂ.ಬಾರಿ,ಶ್ರೀನಿವಾಸ ದರವೇಶ,ಗೋವಿಂದ ಚವ್ಹಾಣ,ಕಿಶಾನ ಜಾಧವ,ವಿಕ್ರಂ ಚವ್ಹಾಣ,ಗೇಮಸಿಂಗ್ ರಾಠೋಡ್,ಶ್ರೀನಿವಾಸ ಚಿಂಚೋಳಿಕರ್ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!