
ಉದಯವಾಹಿನಿ,ದೇವದುರ್ಗ: ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು ರಾಷ್ಟ್ರದ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ನನ್ನ ದೇಶ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ ಎಂದು ನಾನು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ. ಸರ್ದಾರ್ ವಲ್ಲಭಬಾಯಿ ಪಾಟೀಲ್ ರವರು ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣ ಸ್ಪೂರ್ತಿಯಾಗಿದೆ. ರಾಘವೇಂದ್ರ ತಾಲೂಕ ಯೋಜನಾಧಿಕರಿಗಳು ನಂತರ ಮಾತನಾಡಿದ ಅವರು ಭಾರತ ದೇಶದಲ್ಲಿ ಎಲ್ಲಾರು ಒಗ್ಗಟ್ಟಿನ ಮಂತ್ರವನ್ನು ಜಪಿಸಲಾಗುತ್ತಿರುವುದು ಇದು ನಮ್ಮಲ್ಲಿರುವ ಏಕತೆಯನ್ನು ತೋರಿಸುತ್ತದೆ ಎಂದರು. ಭಾರತವು ವಿವಿಧ ಸಂಸ್ಕ್ರತಿ, ಸಂಪ್ರದಾಯ, ಧರ್ಮ, ಭಾಷೆಗಳ ಶ್ಲಾಘನೀಯ ಸಂಯೋಜನೆಯನ್ನು ನಾವು ಕಾಣುವ ನೆಲವಾಗಿದೆ ಎಂದರು.
ಕೇಂದ್ರದ ಗೃಹ ಸಚಿವರು, ಸಹಕಾರ ಸಚಿವರು ಹಾಗೂ ಮಾಜಿ ಉಪ ಪ್ರಧಾನಿ ಮಂತ್ರಿಗಳಾದ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸವನ್ನು ತಾಲೂಕು ಪಂಚಾಯಿತಿ ದೇವದುರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು . ವಿಶೇಷ ಅಭಿಯಾನ ಮಾಡಲಾಗುತ್ತಿದೆ.ಈ ಸಮಯದಲ್ಲಿ ರಾಘವೇಂದ್ರ ಯೋಜನಾಧಿಕಾರಿಗಳು ಮಲ್ಲಿಕಾರ್ಜುನ, ವ್ಯವಸ್ಥಾಪಕಮಲ್ಲಿಕಾರ್ಜುನ ಸಿಬ್ಬಂದಿ ವರ್ಗದವರು ಹಾಜರಿದ್ದರು.
