
ಉದಯವಾಹಿನಿ ಕುಶಾಲನಗರ:- ಕುಶಾಲನಗರದಲ್ಲಿ ಕೊರಿಯರ್ ಮೂಲಕ ನಡೆದ ವಂಚನೆ ಪ್ರಕರಣದಲ್ಲಿ ನಕಲಿ ಮೊಬೈಲ್ ಚಾರ್ಜರ್ ಗಳನ್ನು ಬಳಸಿ 25 ಲಕ್ಷ ರೂಗಳಿಗೂ ಅಧಿಕ ಹಣ ವಂಚನೆ ಮಾಡಿರುವುದಾಗಿ ಪೊಲೀಸ್ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂಎ ಅಯ್ಯಪ್ಪ ಅವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ.
ಮಂಗಳೂರು ಸುರತ್ಕಲ್ ನ ಹಿತೇಶ್ ರೈ. ಗುಡ್ಡೆ ಹೊಸೂರು ಬೊಳ್ಳೂರು ಗ್ರಾಮದ ಎಸ್ಆರ್ ಧರ್ಮ ರಂಗಸಮುದ್ರ ಗ್ರಾಮದ ತೀರ್ಥೇಶ್ ರೈ. ನಗರ ಆದಿಶಂಕರಚಾರ್ಯ ಬಡಾವಣೆಯ ಎಂ.ಟಿ. ಕೀರ್ತನ ಶಿರಂಗಾಲ ಗ್ರಾಮದ ಎಸ್ ಆರ್ ವಿನಯ್.
ಆರೋಪಿಗಳಿಂದ 14 ಲಕ್ಷ ದ
20,000 ನಗದು ಹಣ 73.500 ಬೆಲೆ ಬಾಳುವ ಆಪಲ್ ಕಂಪನಿಗೆ ಸೇರಿದ ವರ್ಜಿನಲ್ ಮೊಬೈಲ್ ಚಾರ್ಜರ್ ಗಳು. 16 ಬಾಕ್ಸ್ ನಲ್ಲಿ ಇದ್ದ 1874 ಮೊಬೈಲ್ ಚಾರ್ಜರ್ಗಳು ಮತ್ತು ಕೃತ್ಯಕ್ಕೆ ಬಳಸಿದ 3 ಮೊಬೈಲ್ ಗಳನ್ನು ವಶಕೆ ಪಡೆಯಲಾಗಿದೆ.
ಆರೋಪಿಗಳು ಬೇನಾಮಿ ಹೆಸರಿನ ಬಟ್ಟೆ ಅಂಗಡಿಯವೊಂದರ ವಿಳಾಸದಲ್ಲಿ ವಿನಾಯಕ ಟ್ರೇಡಿಂಗ್ ವಿಳಾಸ ನೀಡಿ ಲಕ್ಷಾಂತರ ಮೌಲ್ಯದ ಮೊಬೈಲ್ ಗಳನ್ನು ಕೊರಿಯರ್ ಮೂಲಕ ಸ್ವಿಫ್ಟ್ ಮೆಂಟ್ ಮಾಡುತ್ತಿದ್ದರು ಕೊರಿಯರ್ ಮೂಲಕ ಬಂದ ಬಾಕ್ಸ್ ಗಳನ್ನು ಈ ಬಟ್ಟೆ ಅಂಗಡಿಯಲ್ಲಿ ಓಪನ್ ಮಾಡಿ ನಕಲಿ ಚಾರ್ಜರ ಗಳನ್ನು ತುಂಬಿಸಿ ಅಂಗಡಿಗಳಿಗೆ ನೀಡುತ್ತಿದ್ದರು.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಬಿಜಿ ಮಹೇಶ್ ಪಟ್ಟಣ ಠಾಣಾಧಿಕಾರಿ ಎಂ ಡಿ ಅಪ್ಪಾಜಿ ಪ್ರೊಫೆಷನಲ್ ಪಿಎಸ್ಐ ಕಾಶಿನಾಥ್ ಬಗಲಿ ಎಎಸ್ಐ ಗಣಪತಿ ಸಿಬ್ಬಂದಿಗಳಾದ ಜಯಪ್ರಕಾಶ್ ಸಂದೀಪ್ ಅರುಣ ಕುಮಾರ್ ಮನೋಜ್ ಕುಮಾರ್ ಸಿದ್ದರಾಜು ಸೌಮ್ಯ ರಾಜೇಶ್ ಗಿರೀಶ್ ಪ್ರವೀಣ್ ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು
