ಪೀಣ್ಯ ದಾಸರಹಳ್ಳಿ: ಕ್ಷೇತ್ರದ

ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಹಾಗೂ ರಾಜ್ಯ ವಿಶ್ವಕರ್ಮ ನಿಗಮ ಮಂಡಳಿಯ ಮಾಜಿ ನಿರ್ದೇಶಕ ರಾಮಚಂದ್ರ ಅವರ ನೇತೃತ್ವದಲ್ಲಿ ಎಸ್. ರಮೇಶ್ ರಸ್ತೆಯಲ್ಲಿರುವ ಅವರ ಸ್ವಗ್ರಹದ ಆವರಣದಲ್ಲಿ ಸೃಷ್ಟಿ ಕರ್ತ ಭಗವಾನ್ ವಿಶ್ವಕರ್ಮ ಜಯಂತ್ಯೋತ್ಸವಕ್ಕೆ ಶಾಸಕ ಆರ್ ಮಂಜುನಾಥ್ ಉದ್ಘಾಟಿಸಿದರು.

ರಾಜ್ಯ ವಿಶ್ವಕರ್ಮ ನಿಗಮ ಮಂಡಳಿಯ ಪ್ರಪ್ರಥಮ ಮಾಜಿ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ  ಮಾತನಾಡಿ  ಅಮರಶಿಲ್ಪಿ ಜಕಣಾಚಾರಿಯವರು ಇಡಿ ದೇಶದ ವಿದೇಶಗಳಿಗೆ ಶಿಲ್ಪಕಲೆಯನ್ನು ಪಾಶ್ಚಾತ್ಯ ದೇಶದವರು ಸಹ ಬಂದು ನೋಡಿ ಬೆರಗಾಗುವಂತೆ ನಿರ್ಮಿಸಿದ್ದಾರೆ ಯಾವುದೇ ತಂತ್ರಜ್ಞಾನದ ಮೋರೆ ಹೋಗದೇ ವಾಸ್ತು ಶಿಲ್ಪಿವನ್ನು ಕಟ್ಟಿ ಕೊಟ್ಟಿರುವುದು ಇತಿಹಾಸದ ಲ್ಲಿ ಅಚ್ಚಳಿಯದೆ ನೂರಾರು ವರ್ಷಗಳಿಂದ ನಮ್ಮ ಕಣ್ಣುಮುಂದಿವೆ ರಾಜ್ಯ ಕೇಂದ್ರ ಸರ್ಕಾರ ಇದನೇಲ್ಲಾ ಎಚ್ಚೆತ್ತಿಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದಾಗ ವಿಶ್ವಕರ್ಮ ಸಮಾಜದವರ ಬಗ್ಗೆ ಕಾಳಜಿವಹಿಸಿ ಪ್ರತ್ಯೇಕ ವಿಶ್ವಕರ್ಮ ನಿಗಮ ಮಂಡಳಿ ಸ್ಥಾಪನೆ ಮಾಡಿ ನೂರಾರು ಕೋಟಿ ಬಿಡುಗಡೆ ಮಾಡಿದ ಕೀರ್ತಿ ಸಿದ್ದರಾಮಯ್ಯರವರದು.

ಕೆ ಪಿ ನಂಜುಂಡಿರವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿದ ಬಿಜೆಪಿ ಸರ್ಕಾರ ಸುಳ್ಳು ಹೇಳಿ ಕಾಲಹರಣ ಮಾಡಿತ್ತಿವೆ ಎಂದು ಶ್ರೀನಿವಾಸ್ ಸರಕಾರಗಳಿಗೆ ತರಾಟೆಗೆ ತೆಗೆದುಕೊಂಡರು. ಅದಲ್ಲದೆ ಸೆಪ್ಟೆಂಬರ್ 17ರಂದು ಸಾರ್ವತ್ರಿಕ ರಜೆದಿನಾವನ್ನಾಗಿ ಘೋಷಣೆ ಮಾಡಬೇಕು ಮತ್ತು ವಿಧಾನಸೌಧ ಆವರಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಯವರ ವಿಗ್ರಹವನ್ನು ಪ್ರತಿಷ್ಠಾಪಿಸ ಬೇಕು ಎಂದು ಇದೆ ವೇಳೆ ಶ್ರೀನಿವಾಸ್ ಆಚಾರ್ಯ ಸರಕಾರಗಳಿಗೆ ಮನವಿ ಮಾಡಿಕೊಂಡು ಕಳವಳ ವ್ಯಕ್ತಪಡಿಸಿದರು.  ಶ್ರೀ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ  ಸಾನಿಧ್ಯ ವಹಿಸಿದರು.

ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ರಾಮಚಂದ್ರ ಸರ್ವರಿಗೂ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಪಿ ಎನ್ ಕೃಷ್ಣಮೂರ್ತಿ, ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್, ದಾ‌ಸರಹಳ್ಳಿ  ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ  ಉಮಾದೇವಿ ನಾಗರಾಜ್, ರಮೇಶ್, ಮೋನೇಶ್, ಮಹೇಶ್,ವೈಜನಾಥ್, ಧನಂಜಯ್ಯ, ರಾಜಗೋಪಾಲ್, ಮೂರ್ತಿ,ಜಯಣ್ಣ, ಸ್ವಾಮಿ,ವಿಶ್ವಕರ್ಮ ಸಮಾಜದರು ಇದ್ದರು.

error: Content is protected !!