
ಉದಯವಾಹಿನಿ ಅಪಜಲಪುರ: ಈ ಗ್ರಾಮದಲ್ಲಿ ಸರಿಯಾದ ರಸ್ತೆಗಳಿಲ್ಲ ಚರಂಡಿಗಳಿಲ್ಲ ಈ ಗ್ರಾಮ ಮೂಲಭೂತ ಸೌಕರ್ಯಗಳಿಗೆ ಬಹಳಷ್ಟು ವಂಚಿತವಾಗಿರುವುದು ವಿಪರ್ಯಾಸವಾಗಿದೆ ಅಧಿಕಾರಿಗಳು ಜನಪ್ರತಿನಿಧಿಗಳು ಯಾಕೆ ಕೆಲವೊಂದಿಷ್ಟು ಗ್ರಾಮಗಳಿಗೆ ಕಣ್ತಿರೋದು ನೋಡುವಲ್ಲಿ ವಿಫಲವಾಗುತ್ತಿದ್ದಾರೆ ಎಂಬುದು ನಮ್ಮ ಪ್ರಶ್ನೆಯಾಗೇ ಉಳಿಯುತ್ತಿದೆ, ಅಂತಹ ಗ್ರಾಮ ಯಾವುದು ಅಂದರೆ ತಾಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಲ್ವಾಡ ಕೆ ಗ್ರಾಮದ ಪರಸ್ಥಿತಿ ಇದಾಗಿದ್ದು ಗ್ರಾಮದಲ್ಲಿ ಚರಂಡಿ ಇಲ್ಲದೆ ನೀರು ರಸ್ತೆ ಮೇಲೆ ಹರಿದು ಬಂದು ಗ್ರಾಮಸ್ಥರಿಗೆ ರೋಗಗಳು ಹರಡುತ್ತಿದ್ದು ಗ್ರಾಮದ ಜನರ ಪರಸ್ಥಿತಿ ಕೇಳೋರಿಲ್ಲಂತಾಗಿದೆ ಗ್ರಾಮದಲ್ಲಿ ಚರಂಡಿ ನೀರು ರಸ್ತೆಯ ಮೇಲೆ ನಿಂತಿದ್ದು. ಹಿರಿಯರಿಗೆ ಬಹಳ ಕಷ್ಟವಾಗುತ್ತಿದ್ದು ಅದರಂತೆ ಸಣ್ಣ ಸಣ್ಣ ಮಕ್ಕಳು ಈ ಚರಂಡಿ ನೀರಿನಲ್ಲಿ ನಡೆದುಕೊಂಡೇ, ಶಾಲೆಗೆ ಹೋಗುವಂತ ಪರಿಸ್ಥಿತಿ ಎದುರಾಗಿದೆ. ಅಫಜಲಪುರ ದಿಂದ ದೇವಲಗಣಪುರದ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿ ಸರ್ಕಾರಿ ಶಾಲೆಯಿದ್ದು ಆ ಶಾಲೆಗೆ ತಡೆಗೋಡೆ ಗೋಡೆ ಇಲ್ಲದಿರುವುದು ಮಕ್ಕಳು ಜೀವ ಭಯದಲ್ಲೇ ತಿರುಗಾಡುವ ಪರಿಸ್ಥಿತಿ ಎದುರಾಗಿದೆ.ಗ್ರಾಮದ ಹಿರಿಯರಾದ ಮೈಬೂಬ್ ರವರು ಮಾತನಾಡಿ ಗ್ರಾಮದಲ್ಲಿ ನಮಗೆ ತಿರುಗಾಡುವುದು ಬಹಳ ಕಷ್ಟ ಆಗ್ತಾ ಇದ್ದು ಗ್ರಾಮದಲ್ಲಿ ಸರಿಯಾಗಿ ರಸ್ತೆಗಳಿಲ್ಲ, ಚರಂಡಿಗಳಿಲ್ಲ, ಚರಂಡಿ ನೀರು ರಸ್ತೆ ಮೇಲೆ ಹರಿದು ಬರುತ್ತಿದ್ದು. ನಮಗೆ ಬಹಳ ಕಷ್ಟವಾಗುತ್ತಿದೆ ವಯಸ್ಸಾದವರು ಸಣ್ಣ ಮಕ್ಕಳ ತಿರುಗಾಡುವುದು ಆಗುತ್ತಿಲ್ಲ ನಾವು ಗ್ರಾಮ ಪಂಚಾಯ್ತಿಯವರಿಗೆ ಎಷ್ಟು ಬಾರಿ ಹೇಳಿದರು. ಅವರು ನಮ್ಮಂತ ಬಡವರ ಮಾತಿಗೆ ಬೆಲೆ ಕೊಡುತ್ತಿಲ್ಲ ಪಿಡಿಓ ಸಾಹೇಬ್ರ ಗಮನಕ್ಕೆ ಎಷ್ಟು ಬಾರಿ ತಂದರು ನಮ್ಮ ಮಾತನ್ನ ತಲೆಗೆ ಹಾಕಿಕೊಳ್ಳುತ್ತಿಲ್ಲ ಎಂದರು. ಕೂಡಲೇ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಈ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ವದಗಿಸಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.
