ಉದಯವಾಹಿನಿ ಚಿತ್ರದುರ್ಗ: ನಮಗೆ ಯಾರು ಯಾವುದೇ ಭಾಷೆಯಲ್ಲಿ ಮಾತನಾಡಿಸಲಿ ಅವರಿಗೆ ನಾವು ಕನ್ನಡದಲ್ಲೇ ಉತ್ತರಿಸಬೇಕು ಕನ್ನಡ ಭಾಷೆ ತಿಳಿದರೂ ಕನ್ನಡ ಮಾತನಾಡದ ಬಹುತೇಕ ಜನ ಕರ್ನಾಟದಲ್ಲಿದ್ದಾರೆ ಅಂತಹರಿಗೆ ಕನ್ನಡ ಮಾತನಾಡುವುದು ಸಹ ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ನಾವು ಮೂಡಿಸಬೇಕು. ಈಗ ಹಲವರು ಇಂಗ್ಲಿಷ್ ಮಾತನಾಡುವುದು ಒಳ್ಳೆಯದು ಮತ್ತು ನಾವು ವಿದ್ಯಾವಂತರು ಅಥವಾ ಉತ್ತಮ ಉದ್ಯೋಗದಲ್ಲಿ ಇದ್ದೇವೆ ಎಂದು ತೋರಿಸಿಕೊಳ್ಳುವುದಕ್ಕೆ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ನಾವು ಈ ಪೊಳ್ಳು ವಾದದಿಂದ ಹೊರಬಂದು ಕನ್ನಡವನ್ನು ವಿಶ್ವಾಸದಿಂದ ಮಾತನಾಡಲು ಪ್ರಾರಂಭಿಸೋಣ ಕನ್ನಡ ನಮ್ಮ ಉಸಿರಾಗಿಸೋಣ ಕರ್ನಾಟಕದ ಕೀರ್ತಿಯನ್ನು ವಿಶ್ವಕ್ಕೆ ಹರಡೋಣ” ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಚಿತ್ರದುರ್ಗ ವೀರಶೈವ ಸಮಾಜದ ಮಹಿಳಾ ಘಟಕದ ಮುಖ್ಯ ಕಾರ್ಯದರ್ಶಿ ಶ್ರೀಮತಿ ರೀನಾ ವೀರಭದ್ರಪ್ಪ ಕರೆ ನೀಡಿದರು.
68ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕದ ಸುವರ್ಣ ಸಂಭ್ರಮ ಆಚರಣೆ ಸಂಧರ್ಭದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಭಜನಾ ಮಂಡಳಿ ಚಿತ್ರದುರ್ಗ ವತಿಯಿಂದ ನಗರದ ಬ್ಯಾಂಕ್ ಕಾಲೋನಿಯ ಶ್ರೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಮುಝ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ  ಬುರುಜನಹಟ್ಟಿ ಉರ್ದು ಶಾಲೆಯ ಕನ್ನಡ ಶಿಕ್ಷಕಿ ” ಯೋಗ ಕೇಂದ್ರವೆಂದರೆ ಕೇವಲ ವ್ಯಾಯಾಮಕ್ಕೆ ಸೀಮಿತವಲ್ಲ ಆರೋಗ್ಯವಂತ ಜೀವನಕ್ಕೆ ನಿತ್ಯ ವ್ಯಾಯಾಮದ ಜೊತೆಗೆ ಸಾಹಿತ್ಯ ,ಕಲೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಿ ಜೀವನ ಆನಂದಮಯ ಗೊಳಿಸಬೇಕು.ಅಂತಹ ಕಾರ್ಯ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಮಾಡುತ್ತಾ ಬಂದಿದೆ ಎಲ್ಲರನ್ನೂ ಸದಾ ಚಟುವಟಿಯಿಂದ ಇರಿಸುವ ಯೋಗ ಗುರುಗಳಾದ ರವಿ ಕೆ.ಅಂಬೇಕರ್ ರವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಎಲ್ಲಾ ಯೋಗ ಬಂಧುಗಳಿಗೆ ಸಂತಸ ತಂದಿದೆ ಎಂದು ಅಭಿನಂದಿಸಿದರು.
ಕಾರ್ಯಕ್ರಮವನ್ನು ನಿರೂಪಿಸಿ ಮಾತನಾಡಿದ ಶಿಕ್ಷಕಿ ಶ್ರೀಮತಿ ನಾಗಲತಾ ” ಕರ್ನಾಟಕ ರಾಜ್ಯದ ರಚನೆಯನ್ನು ಗೌರವಿಸಲು ಇಡೀ ರಾಜ್ಯವು ಸುವರ್ಣ ಸಂಭ್ರಮವಾಗಿ ಕರ್ನಾಟಕ ರಾಜ್ಯೋತ್ಸವ ಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಯತ್ತಿದೆ  ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಮಾತೃಭಾಷೆಯಿಂದ ಮಾತ್ರ ಸಾಧ್ಯ. ಮಾತೃಭಾಷೆಯನ್ನು ಕಡೆಗಣಿಸಿದ ವ್ಯಕ್ತಿ ಹೆತ್ತ ತಾಯಿಯನ್ನು ಕಡೆಗಣಿಸಿದಷ್ಟೇ ಸತ್ಯ. ಕನ್ನಡಿಗನಾಗಿ ಹುಟ್ಟಿ ಕೊನೆಗೆ ಮಣ್ಣಲ್ಲಿ ಮಣ್ಣಾಗುವ ವರೆಗೆ ಕನ್ನಡಿಗನಾಗಿ ಬದುಕಿ ಬಾಳುವವನು ನಿಜವಾದ ಭಾಷಾ ಪ್ರೇಮಿ. ಈ ಶುಭ ಸಂಧರ್ಭದಲ್ಲಿ ಕನ್ನಡದ  ಬೆಳಣಿಗೆಗಾಗಿ ನಾವೆಲ್ಲರೂ ಪಣತೊಡುವುದರೊಂದಿಗೆ ಈ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸೋಣ ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಗಟ್ಟ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ.,ಯೋಗ ಶಿಕ್ಷಕ ಬಸವರಾಜ್ ಎಲ್.ಎಸ್.,ಮಲ್ಲಿಕಾರ್ಜುನಪ್ಪ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್,  ಹಿರಿಯ ಯೋಗ ಸಾಧಕಿ ವನಜಾಕ್ಷಮ್ಮ, ಅಂಬುಜಾಕ್ಷಿ, ರೇಣುಕಾ, ಭಾಗ್ಯ, ಮೀನಾಕ್ಷಿ, , ಹೇಮಲತಾ, ಅನುಸೂಯ. ರಮಾ, ಶೀಲಾ, ಚಿತ್ರಾ, ಅನಿತಾ, ಸುನೀತಾ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು ಕನ್ನಡದ ದ್ಯೂತಕವಾದ ಹಳದಿ ಮತ್ತು ಕೆಂಪು ಬಣ್ಣಗಳ ಸೀರೆಗಳನ್ನು ಧರಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು.

Leave a Reply

Your email address will not be published. Required fields are marked *

error: Content is protected !!