ಉದಯವಾಹಿನಿ ಇಂಡಿ: ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಅನುಷ್ಠಾನವಾಗಬೇಕು. ಆಧ್ಯತೆ ಬದ್ಧತೆ ಆಗಬೇಕು.ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರಲ್ಲೂ ಕನ್ನಡ ಮೇಳೈಸಲಿ, ಕನ್ನಡವೆಂದರೆ ಜನಜಂಗುಳಿಯಲ್ಲ ಅದು ಜೀವನಶೈಲಿ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.  ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ 68 ನೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಉಪನ್ಯಾಸ ನೀಡಿ ಮಾತನಾಡಿದ ಕಲಬುರಗಿ ಶರಣ ಬಸವೇಶ್ವರ ವಿವಿ ಕನ್ನಡ ಅಧ್ಯಯನ ಪೀಠದ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾನಾಸಾಹೇಬ ಹಚಡದ ಮಾತನಾಡಿ ಭಾರತದಲ್ಲಿ ಕನ್ನಡ 21 ನೆಯ ಸ್ಥಾನದಲ್ಲಿದೆ. ನಮ್ಮ ನಾಡು ಕರ್ನಾಟಕವೆಂದು ಮರುನಾಮಕರಣಗೊಂಡು 50 ವರ್ಷಗಳು ಕಳೆದಿವೆ. ಕರ್ನಾಟಕದ ಏಕೀಕರಣಕ್ಕೆ ಅನೇಕ ಸಾಹಿತಿಗಳು, ಕಲಾವಿಧರು, ಚಿಂತಕರು, ಸಂಶೋಧಕರು, ಸಂಘ ಸಂಸ್ಥೆಗಳು ಬೆಂಬಲಿಸಿ 1973೧೯ ನ. 1 ರಂದು ಕರ್ನಾಟಕ ಎಂದು ನಾಮಕರಣ ಮಾಡಿದ್ದು,ದೇಶದಲ್ಲೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಪಾತ್ರವಾದಂಥ ಭಾಷೆಯು ಸಮಗ್ರ ಅಭಿವೃದ್ಧಿಯಾಗಬೇಕಾಗಿದೆ.ಕನ್ನಡದ ಹಿತವನ್ನು ಒಡಲಲ್ಲಿಟ್ಟುಕೊಂಡು ಕನ್ನಡ ಭಾಷಾ ಮತ್ತು ಸಮಗ್ರ ಅಭಿವೃದ್ಧಿ ನೀತಿಯ ಬಗ್ಗೆ ನೀರ್ಲಕ್ಷö್ಯ ತೋರದೇ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಲಿ, ಕನ್ನಡ ಭಾಷಾ ಪ್ರೇಮ ಆಡಳಿತ ಯಂತ್ರಕ್ಕೆ ಒಳ್ಳೆಯ ವಿಚಾರವಾಗಲಿ ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ,ಬಸವರಾಜ ಗೋರನಾಳ, ಶಿಕ್ಷಕಿ ಪಿ.ಎಸ್.ಹೂಗಾರ ಮಾತನಾಡಿದರು. ವೇದಿಕೆಯ ಮೇಲೆತಹಸೀಲ್ದಾರ ಬಿ.ಎಸ್.ಕಡಕಬಾವಿ,ಇಒ ಬಾಬುರಾವ ರಾಠೋಡ,ಪೋಲಿಸ್ ಉಪಾಧೀಕ್ಷಕರು ಎಚ್.ಎನ್.ಜಗದೀಶ,ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ವೇದಿಕೆಯ ಮೇಲಿದ್ದರು.ಸಮಾರಂಭದಲ್ಲಿ ಕರವೇ ಅಧ್ಯಕ್ಷ  ಶಿವು ಮಲಕಗೊಂಡ,ಬಾಳು ಮುಳಜಿ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆದಾರ, ಎಸ್.ಆರ್.ರುದ್ರವಾಡಿ, ಎ.ಎಸ್.ಲಾಳಸೇರಿ, ಬಿ.ಜೆ.ಇಂಡಿ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಏವೂರ, ಉಪ ತಹಸೀಲ್ದಾರ ಧನಪಾಲಶೆಟ್ಟಿ, ಚಂದ್ರಕಾoತ ಕರೂರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮತ್ತಿತರಿದ್ದರು. ಹಿರಿಯ ಸಾಹಿತಿ ಸಂಶೋಧಕ ಡಿ.ಎಸ್.ಅಕ್ಕಿ ಮತ್ತು ನಾನಾಸಾಹೇಬ ಹಚಡದ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!