
ಉದಯವಾಹಿನಿ ಇಂಡಿ : ಭಾರತದ ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ 1928 ರಲ್ಲಿ ಗುಜರಾತದ ಬರಡೋಲಿಯಲ್ಲಿ ಜರುಗಿದ ಸತ್ಯಾಗ್ರಹದಲ್ಲಿ ಭಾರತದ ಏಕತೆಗಾಗಿ ಸರದಾರ ವಲ್ಲಭಭಾಯಿ ಪಟೇಲರು ಮಹತ್ವದ ಪಾತ್ರ ವಹಿಸಿದ್ದರು ಎಂದು ಪ್ರಾಧ್ಯಾಪಕ ಡಾ.ನಾಗರಾಜ ಮರಗೋಡ ಹೇಳಿದರು. ಅವರು ಮಂಗಳವಾರ ಇಂಡಿ ಪಟ್ಟಣದ ಜಿಆರ್ಜಿ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಏಕತಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಸತ್ಯಾಗ್ರಹದಲ್ಲಿ ಗೆಲವು ಸಾಧಿಸಿದ ನಂತರ ಅಲ್ಲಿಯ ಮಹಿಳೆಯರು ವಲ್ಲಭಭಾಯಿ ಪಟೇಲರಿಗೆ ಸದರ್ಾರ ಎಂಬ ಪದವಿಯನ್ನು ನೀಡಿದರು. ಸ್ವತಂತ್ರ ಭಾರತವನ್ನು ಏಕೀಕರಣಗೊಳಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಕಾರ್ಯ ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಬಿ. ಜಾಧವ ಮಾತನಾಡಿ, ಭಾರತದ ಮೊದಲ ಉಪಪ್ರಧಾನಿ ಸದರ್ಾರ ವಲ್ಲಭಭಾಯಿ ಪಟೇಲರು ಭಾರತದ ಹಲವಾರು ಧರ್ಮ ಹಾಗೂ ನೂರಾರು ಜಾತಿಗಳಿಂದ ಕೂಡಿರುವ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದರು.
ರಾಷ್ಟ್ರೀಯ ಏಕತಾ ದಿನಾಚರಣೆಯ ನಿಮಿತ್ಯ ಮಹಾವಿದ್ಯಲಯದಲ್ಲಿ ಸದರ್ಾರ ವಲ್ಲಭಭಾಯಿ ಪಟೇಲರ ಜೀವನ & ವ್ಯಕ್ತಿತ್ವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಡಾ ಪಿ.ಕೆ. ರಾಠೋಡ ನಿರೂಪಿಸಿದರು. ಡಾ. ಜಯಪ್ರಸಾದ ಡಿ ಸ್ವಾಗತಿಸಿದರು.ಇಂಡಿ ಪಟ್ಟಣದ ಜಿಆರ್ಜಿ ಕಲಾ ಮಹಾವಿದ್ಯಾಲಯದ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಏಕತಾ ದಿನಾಚರಣೆಯಲ್ಲಿ ಪ್ರಾಧ್ಯಾಪಕ ಡಾ. ನಾಗರಾಜ ಮುರಗೋಡ ಮಾತನಾಡಿದರು.
