ಉದಯವಾಹಿನಿ  ಪೀಣ್ಯ,ದಾಸರಹಳ್ಳಿ: ಕ್ಷೇಮಾಭಿವೃದ್ಧಿ ಸಂಘಗಳು ಸ್ಥಾಪನೆಯಾಗುವುದರಿಂದ ವೇದಿಕೆಯಿಂದ ಈ ಪ್ರದೇಶದ ಜನರ ಸಮಸ್ಯೆಗಳನ್ನು ಭಗಿಹರಿಸಲು ಅನುಕೂಲ ವಾಗುತ್ತದೆ’, ಎಂದು ಮಾಜಿ ಸಚಿವರು ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್ ಗೌಡ್ರು  ಹೇಳಿದರು.ಕ್ಷೇತ್ರದ ವಿನಾಯಕನಗರ ರಾಮಾಂಜನೇಯ, ಮತ್ತು  ಶ್ರೀ ಶಿರಡಿ ಸಾಯಿ ಬಾಬಾ ಬಡಾವಣೆಯಲ್ಲಿ ಶ್ರೀ  ಕನ್ನಡಾಂಬೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಪಾಲ್ ಅವರ  ಅಧ್ಯಕ್ಷತೆಯಲ್ಲಿ ನಾಗರೀಕರು ನೂತನವಾಗಿ ಸ್ಥಾಪಿಸಿದ ಶ್ರೀ ಕನ್ನಡಾಂಬೆ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಶ್ರೀ  ಕನ್ನಡಾಂಬೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ,  ಇದೆ ವೇಳೆ ದಿವಂಗತ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆ ಆರಾಧನೆ  ಪ್ರಯುಕ್ತ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕ ಬಂಧು ಭಗನಿಯರಿಗೆ  ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಮಂಡ್ಯ ಮಲ್ಲೇಶ್, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ನಾಗರಾಜ್, ಬಿಜೆಪಿ ಮುಖಂಡ ಹೊಸಹಳ್ಳಿ ಸತೀಶ್, ದೊಡ್ಡಬಿದರಕಲ್ಲು ವಾರ್ಡಿನ ಬಿಜೆಪಿ  ಉಪಾಧ್ಯಕ್ಷ  ಅರುಣ್ ಬೈಲಪ್ಪ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಹೆಚ್.ಆರ್, ಶ್ರೀನಿವಾಸ್, ಗೌರವಾಧ್ಯಕ್ಷ  ಚಂದ್ರಪ್ಪ , ಪ್ರಧಾನ ಕಾರ್ಯದರ್ಶಿ ಚಂದ್ರು, ಖಜಾಂಚಿ ವಿಷಕಂಠೇಗೌಡ, ಪದಾಧಿಕಾರಿಗಳಾದ ಶಂಕರಪ್ಪ, ಗಂಗಹುಚ್ಚೇಗೌಡ, ಶ್ರೀಶೈಲ, ಲೋಕೇಶ್, ಚೇತನ್ ಕುಮಾರ್, ಪ್ರಕಾಶ್, ರಾಮಕೃಷ್ಣ, ಶಿವರಾಜ್, ಚನ್ನಿಗಪ್ಪ, ರಂಗಸ್ವಾಮಿ, ಗಂಗಾಧರ್, ನಾಗರಾಜ್, ಶಂಕರಪ್ಪ, ಹೊನ್ನಪ್ಪ, ಉಮೇಶ್, ಕೃಷ್ಣಪ್ಪ ಸೇರಿದಂತೆ ಹಲವಾರು ಪ್ರಮುಖ ಗಣ್ಯರು, ಸಮಸ್ತ  ನಾಯಕರು ಮಹಿಳೆಯರು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!