ಉದಯವಾಹಿನಿ ಸಿಂಧನೂರು: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಹಳೆಯ ಭಾಷೆ  ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕಾಯಕ ಆಗಬೇಕು.ಈ ನಾಡಲ್ಲಿ ಹುಟ್ಟುವುದೇ ನಮ್ಮ ಪೂರ್ವಜನ್ಮದ ಪುಣ್ಯ ಎಂದು ಆದಿಕವಿ ಪಂಪ ಅವರು ಹಾಡಿ ಹೊಗಳಿದ್ದಾರೆ ಎಂದು ಹೇಳಿದರು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ 50 ವರ್ಷಗಳ ಕಾಲ ಪೊರೈಸಿದ ಕನ್ನಡ ರಾಜ್ಯೋತ್ಸವದ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲ್ಲೂಕು  ತಹಶೀಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಅವರು ಕನ್ನಡ ಭಾಷೆ ಪೂರ್ವಿಕ ಹಿರಿಯರಿಂದಲೂ ಹಳೆ ಭಾಷೆ (ಕಿ.ಪೂ 450 ನೇ ಇಸ್ವಿನಲ್ಲಿ ಹಲ್ಮಿಡಿ ಶಾಸನಗಳು ಮೂಲಕ ದೊರೆತಿವೆ.
ಕನ್ನಡದ ಮಾಟ್ಟ ಮೊದಲ ಮನೆತನ ಎಂದರೆ ಅದು ಬನವಾಸಿಯ ಕದಂಬರು ಈ ಮನೆತನದವರು ಪಲ್ಲವರ ಮೇಲೆ ದಾಳಿ ನಡೆಸಿ ಅತಿಕ್ರಮಿಸಿ ತಮ್ಮ ಕದಂಬ ವಂಶವನ್ನು ಸ್ಥಾಪನೆ ಮಾಡಿದರು.
ಮೈಸೂರು ರಾಜ ಮನೆತನದ ಹೆಸರು ಉಲ್ಲೇಖಿಸಲಾಗಿದೆ ಎಂದರು ಕನ್ನಡ ಭಾಷೆ ರಾಜ್ಯದ ಇತಿಹಾಸದಲ್ಲಿ ಮೈಸೂರು ರಾಜವಂಶಸ್ಥ ಇಲ್ಲದೆ ಪೂರ್ಣಗೊಳ್ಳುವುದಿಲ್ಲ ಎಂದರು.
ಈ ಸಂದರ್ಭದಲ್ಲಿ. ತಾಲ್ಲೂಕು ತಹಶೀಲ್ದಾರ್ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣವನ್ನು ಶಾಸಕ ಹಂಪನಗೌಡ ಬಾದರ್ಲಿ ನೆರವೇರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮತ್ತು ಶಾಲಾ ಕಾಲೇಜುಗಳ ಸಾಂಸ್ಕೃತಿಕ ಸ್ಥಂಭ ಪ್ರದರ್ಶನ ನೀಡಲಾಯಿತು. ಈ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್ ದೊಡ್ಡಬಸವರಾಜ .ಪೌರಾಯುಕ್ತರು ಮಂಜುನಾಥ್ ಗುಂಡೂರು
ಡಿವಾಯ್ ಎಸ್ಪಿ ತಳವಾರ. ಇಒ ಚಂದ್ರಶೇಖರ್ ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯ ಸ್ವಾಮಿ ಅಂತರಗಂಗೆ ಮತ್ತು ಎಲ್ಲಾ ಕನ್ನಡ ಪರ ಸಂಘಟನೆಗಳು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಿವಿಧ  ಇಲಾಖೆಗಳ ಅಧಿಕಾರಿಗಳು ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಮುದ್ದು ಮಕ್ಕಳು  ಸಿಬ್ಬಂದಿ ವರ್ಗ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!