
ಉದಯವಾಹಿನಿ,ಶಿಡ್ಲಘಟ್ಟ: ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟ ಹೀಗೆ ಭಾಗಗಳಾಗಿ ಹಂಚಿಕೆಯಾಗಿದ್ದ ರಾಜ್ಯವನ್ನು ಒಗ್ಗೂಡಿಸುವಲ್ಲಿ ಈ ನಾಡಿನ ಅನೇಕ ಹಿರಿಯ ಮಹನೀಯರ ತ್ಯಾಗಬಲಿದಾನದಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.ನಗರದ ಕೋಟೆ ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶಿಡ್ಲಘಟ್ಟ ತಾಲೂಕು ಸಮಾನ ಮಸ್ಕರರ ಹೋರಾಟ ಸಮಿತಿ ವತಿಯಿಂದ ಆಯೋಜನೆ ಮಾಡಿರುವ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1973 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜು ಅರಸು ಅವರು ಮೈಸೂರು ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷಗಳಾಗಿರುವುದರಿಂದ ಈಬಾರಿ ಕನ್ನಡ ರಾಜ್ಯೋತ್ವವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ ಎಂದರು.ಮುಖ್ಯ ಭಾಷಣಕಾರ ಎಸ್.ಎನ್ ಅಮೃತ್ ಕುಮಾರ್ ಮಾತನಾಡಿ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. ಮೈಸೂರು ರಾಜ್ಯವು ಬಳಿಕ ಕರ್ನಾಟಕ ಎಂಬ ಹೆಸರು ಪಡೆಯಿತು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪ್ರತಿ ವರ್ಷದಂತೆ ಈ ವರ್ಷವೂ ಬುಧವಾರ ಬೆಳಗ್ಗೆ 8.30ಕ್ಕೆ ತಾಲ್ಲೂಕು ಕಛೇರಿ ಮತ್ತು ಸಲ್ಲಾಪುರಮ್ಮ ದೇವಸ್ಥಾನದ ಬಳಿ ಧ್ವಜಾರೋಹಣ ನೆರವೇರಿಸಿದರು. ಗಡಿನಾಡು ಎಂದು ಹೆಸರು ಪಡೆದಿರುವ ಶಿಡ್ಲಘಟ್ಟದಲ್ಲಿ150×8 ಅಡಿ ಉದ್ದದ ಕನ್ನಡದ ಬಾವುಟ 200ಬಾವುಟಗಳ ಪ್ರದರ್ಶನವನ್ನು ಸರ್ಕಾರಿ ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮಾಡಲಾಯಿತು. ತಾಲ್ಲೂಕಿನ ಹಲವು ಪಂಚಾಯಿತಿಗಳಿಂದ ಭುವನೇಶ್ವರಿ ತಾಯಿ ಪಲ್ಲಕ್ಕಿಗಳ ಮೆರವಣಿಗೆಯನ್ನು ನಗರದ ಬಸ್ ನಿಲ್ದಾಣದಿಂದ ಕೋಟೆ ವೃತ್ತದ ಮೂಲಕ ರೈಲ್ವೆ ನಿಲ್ದಾಣದಿಂದ ಮಯೂರ ವೃತ್ತದವರೆಗೂ ಡೊಳ್ಳುಕುಣಿತ,ವೀರಗಾಸೆ ಹಲವು ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮದಲ್ಲಿ ಓದಿ, ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇನ್ನು ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಅಂಬಾರಿ ಮಂಜುನಾಥ್ ತನ್ನ ಸೈಕಲ್ ಗೆ ಕನ್ನಡ ಬಾವುಟಗಳೊಂದಿಗೆ ಅಲಂಕರಿಸಿ ಮೆರವಣಿಗೆ ಬಂದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ,ಕಾರ್ಯ ನಿರ್ವಹಣಾಧಿಕಾರಿ ಜಿ.ಮುನಿರಾಜು, ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ,ಬಿಇಒ ನರೇಂದ್ರಕುಮಾರ್ ಸಿಎ,ಡಾ.ವೆಂಕಟೇಶ್ ಮೂರ್ತಿ,ಜಿಲ್ಲಾ ಜಾಗೃತಿ ಮತ್ತು ಉಸ್ತವಾರಿ ಸಮಿತಿ ಸದಸ್ಯ ಮಂಜುನಾಥ್,ಕ.ಸಾ.ಪ.ಅಧ್ಯಕ್ಷ ಬಿ ಆರ್ ಅನಂತಕೃಷ್ಣ, ಬಂಕ್ ಮುನಿಯಪ್ಪ,ಎಸ್ ಎಂ ರಮೇಶ್,ಡಾ.ಸತ್ಯನಾರಾಯಣರಾವ್,ಪ್ರಾಂ ಶುಪಾಲ ವೆಂಕಟೇಶ್,ವಿಸ್ಡಂ ನಾಗರಾಜ್,ನಗರಸಭೆ ಸದಸ್ಯರು,ಎಲ್ಲಾ ಕನ್ನಡಪರ, ಸಮಾನ ಮನಸ್ಕರರ ಹೋರಾಟ ಸಮಿತಿ ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.
