
ಉದಯವಾಹಿನಿ ಮುದ್ದೇಬಿಹಾಳ ; ಮುದ್ದೇಬಿಹಾಳ ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿ ಅಖಂಡ ಭಾರತ ದೇಶವನ್ನು ಆಳಿದ ನೌಕಾದಳ ಪಿತಾಮಹ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ವೃತ್ತವನ್ನು ಲೋಕಾರ್ಪಣೆ ಮುದ್ದೇಬಿಹಾಳ ಪಟ್ಟಣದ ಕನ್ನಡ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಮಹಾರಾಜರ ಅಭಿಮಾನಿಗಳು ಕನ್ನಡ ಪರ ಸಂಘಗಳು ಕನ್ನಡ ರಾಜ್ಯೋತ್ಸವದಂದು ಮಾಡಿದರು. ಈ ವೇಳೆ ಅಪ್ತಾಬ್ ಮನಿಯಾರ್, ವಾಸಿಮ್ ದೇಸಾಯಿ, ಮಹೇಶ ಪೂಜಾರಿ, ಕರಣ್ ವಿಶ್ವ ಕರ್ಮ, ಸೂಹೈಲ್ , ಇಮ್ಮಡಿ ಪುಲಿಕೇಶಿ ಪೇಜ್ ಅಡ್ಮಿನ್ ಮಲ್ಲು, ಮುಂತಾದವರು ಉಪಸ್ಥಿತರಿದ್ದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ 20 ಕ್ಕೂ ಆಟೋಗಳು ಹಾಗೂ ಕಾರು ಚಾಲಕರು ತಮ್ಮ ವಾಹನಕ್ಕೆ ಕನ್ನಡ ಧ್ವಜವನ್ನು ಕಟ್ಟಿಕೊಂಡು ಭವ್ಯಮೆರವಣಿಗೆ ಮಾಡಿಕೊಂಡು ಇಮ್ಮಡಿ ಪುಲಿಕೇಶಿ ಮಹಾರಾಜರ ವೃತ್ತ ಲೋಕಾರ್ಪಣೆಯಲ್ಲಿ ಪಾಲ್ಗೊಂಡರು.
