
ಉದಯವಾಹಿನಿ ಮುದ್ದೇಬಿಹಾಳ: ಕನ್ನಡ ರಾಜ್ಯೋತ್ಸವೆಂಬುದು ಕನ್ನಡಿಗರ ಸ್ವಾಭಿಮಾನದ ಹಬ್ಬವಾಗಿದೆ ಎಂದು ಎನ್.ಡಿ.ಬಡಿಗೇರ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಕನ್ನಡವೇ ಸತ್ಯ. ಕನ್ನಡವೇ ನಿತ್ಯ’. ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ಉಸಿರು, ಜೀವನ. ಪಾವನ ಮಣ್ಣಿದು. ಇದೇ ಕಾರಣದಿಂದ ನವೆಂಬರ್ 1 ಬಂತೆಂದರೆ ಕರುನಾಡಿನ ತುಂಬಾ ಸಂಭ್ರಮ ಮನೆ ಮಾಡುತ್ತದೆ. ನವೆಂಬರ್ ಹತ್ತಿರ ಬರುತ್ತಿದೆ ಎಂದರೇನೇ ಒಂದು ರೀತಿಯ ಪುಳಕ, ಉಲ್ಲಾಸ. ನಮ್ಮ ಭವ್ಯ ನಾಡು ರೂಪುಗೊಂಡ ದಿನವಿದು. ಇದೇ ಕಾರಣದಿಂದ ಕನ್ನಡ ರಾಜ್ಯೋತ್ಸವ ಎಂಬುದು ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಡಾ. ಎಸ್.ಬಿ.ವಡವಡಗಿ ಪ್ರತಿವರ್ಷ ನವೆಂಬರ್ 1 ಅನ್ನು ಕನ್ನಡ ರಾಜ್ಯೋತ್ಸವವನ್ನಾಗಿ ಅದ್ಧೂರಿಯಿಂದ ಆಚರಿಸಲಾಗುತ್ತದೆ. ರಾಜ್ಯ ಮಾತ್ರವಲ್ಲದೆ ದೇಶದ ವಿವಿಧ ಭಾಗ ಹಾಗೂ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಕೂಡಾ ಈ ದಿನವನ್ನು ಸಂಭ್ರಮದಿಂದ ಆಚರಿಸಿ ಖುಷಿಪಡುತ್ತಾರೆ ಎಂದರು. ಪದವಿ ಪ್ರಾಚಾರ್ಯ ಅರುಣ ಹುನಗುಂದ, ಶ.ಸಾ.ಪ ತಾಲೂಕಾ ಅಧ್ಯಕ್ಷ ಬಸವರಾಜ ನಾಲತವಾಡ ಈ ವೇಳೆ ಮಾತನಾಡಿದರು.
ಎಮ್.ಪಿ.ಪಡದಾಳಿ ಸ್ವಾಗತಿಸಿದರು. ರಾಮಚಂದ್ರ ಹೆಗಡೆ ನಿರೂಪಿಸಿದರು. ಜಿ.ಜೆ.ಪಾದಗಟ್ಟಿ ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರಭು ಎಸ್.ಕಡಿ, ನಿರ್ದೇಶಕರಾದ ಜಿ.ಎಸ್.ಓಸ್ವಾಲ್, ಲೀಲಾ ಭಟ್ಟ, ಶಾಂತಾ ಭಟ್ಟ, ಆಂಗ್ಲ ಮಾಧ್ಯಮ ಮುಖ್ಯಗುರು ಮಾತೆ ರಂಜಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
