ಉದಯವಾಹಿನಿ, ಭಾಲ್ಕಿ: ದಲಿತ,ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರರು,ಕೇಂದ್ರ ಮತ್ತು ರಾಜ್ಯ ಸಕರ್ಕಾರದ ಮಾಜಿ ಸಚಿವರು ,ಪ್ರಸ್ತುತ ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಬೀದರ ಜಿಲ್ಲೆಯ ದಲಿತ ಅಭಿಮಾನಿ ಬಳಗದ ವತಿಯಿಂದ ಅದ್ದೂರಿಯಾಗಿ ಗೌರವಿಸಲಾಗುವುದು ಎಂದು
ಮುಖಂಡ ಎಲ್.ಜಿ.ಗುಪ್ತಾ ಹೇಳಿದರು.
ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-50ರ ಅಂಬೆಸಾಂಗವಿ ಕ್ರಾಸ್ ಹತ್ತಿರದ ಗುಪ್ತಾ ಫಾರ್ಮ್‍ಹೌಸ್‍ನಲ್ಲಿ ಮಾಜಿ ಎಮ್‍ಎಲ್‍ಸಿ ಕೆ.ಪುಂಡಲಿಕರಾವ ಅಧ್ಯಕ್ಷತೆಯಲ್ಲಿ ಬೀದರ ಜಿಲ್ಲೆಯ ದಲಿತ ಅಭಿಮಾನಿ ಬಳಗದ ವತಿಯಿಂದ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೌರವಿಸುವ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಪುಂಡಲಿಕರಾವ ಮಾತನಾಡಿ,ಮಲ್ಲಿಕಾರ್ಜುನ ಖರ್ಗೆಯವರು ಕಲ್ಯಾಣ-ಕರ್ನಾಟಕ ಭಾಗ ಅಭಿವೃದ್ಧಿಪಡಿಸುವಲ್ಲಿ ,ವಿಶೇಷವಾಗಿ ಈ ಭಾಗದ ದಲಿತ ಸಮುದಾಯದ ಏಳಿಗೆಗಾಗಿ ಗಾಡ್ ಫಾದರ್ ಆಗಿ ಕಾರ್ಯನಿರ್ವಹಿಸಿದ್ದಾರೆ.ಸನ್ಮಾನದ ದಿನಾಂಕ ಮತ್ತು ಸ್ಥಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹಿಮ್‍ಖಾನ ಅವರೊಂದಿಗೆ ಚರ್ಚಿಸಿ ನಿರ್ಧರಿಸೋಣ ಎಂದು ಹೇಳಿ,ಇಳಿವಯಸ್ಸಿನಲ್ಲಿರುವ ಖರ್ಗೆಯವರನ್ನು ಭವ್ಯವಾಗಿ ಸನ್ಮಾನಿಸುವ ಕುರಿತು ಗುಪ್ತಾ ಕರೆದ ಪೂರ್ವಭಾವಿ ಸಭೆ ಅರ್ಥಪೂರ್ಣವಾಗಿದೆ ಎಂದರು.
