
ಉದಯವಾಹಿನಿ, ಇಂಡಿ : ತಾಲೂಕಿನ ಲಿಂಗದಲ್ಲಿ ಗ್ರಾಮದಲ್ಲಿ ರಾಜಾರೋಷವಾಗಿ ಓಸಿ ಮಟ್ಕಾ ದಂದೆ ನಡೆಸುತ್ತಿರುವ ಮಾಲೀಕನ ಹೆಸರು ನಾಗೇಶ ಕಟ್ಟಿಮನಿ (ಪಿಂಟು) ಮತ್ತು ಇನ್ನೊಬ್ಬ ಓಸಿ ಮಟ್ಕಾ ಬರೆದು ಕೊಳ್ಳುವನು ವಿಠ್ಠಲ ಡಂಬಾರ್ ಇವರಿಬ್ಬರು ಯಾರ ಭಯವಿಲದೇ ಓಸಿ ಮಟ್ಕಾ ದಂದೆ ನಡೆಸುತ್ತಿದ್ದಾರೆ. ಇದರಿಂದಾಗಿ ಆ ಊರಿನ ಯುವಕರ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದ್ದೆ ಯಾಕೆಂದರೆ ಒಂದು ದಿನಾ ಪೂರ್ತಿಯಾಗಿ ದುಡಿದ ಹಣವನ್ನೆಲಾ ಈ ಓಸಿ ಮಟ್ಕಾ ದಂದೆ ಕೋರರಿಗೆ ಸುರಿಯುತ್ತಿದ್ದಾರೆ.ಮನೆಯ ಆದಾಯವನ್ನೆಲ್ಲಾ ಈ ರೀತಿ ಓಸಿ ಮಟ್ಕಾ ಮೇಲೆ ಸುರಿಯುತ್ತಿದ್ದಾರೆ. ನಾವುಗಳು ಮನೆ ನಡೆಸುವದು ಹೇಗೆ ಎಂದು ಮಹಿಳೆಯರ ಪ್ರಶ್ನೆ ಯಾಗಿದೆ. ಇಲ್ಲಿ ಲಿಂಗದಲ್ಲಿ ಗ್ರಾಮದ ಜನರು ಮಾತ್ರ ವಲ್ಲದೇ ಇಂಡಿ ತಾಲೂಕಿನ ಆದ್ಯಂತ ಜನರು ಲಿಂಗದಲ್ಲಿ ಓಸಿ ಮಟ್ಕಾ ಆಡೋಕೆ ಬರುತ್ತಾರಂತೆ.ಇಂಡಿ ತಾಲೂಕಿನಲ್ಲಿ ಓಸಿ ಮಟ್ಕಾ ಇಷ್ಟೇಲ್ಲಾ ಸದ್ದು ಮಾಡುತ್ತಿದರು ಇಂಡಿ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಂಚಿ ಕುಳಿತ್ತಿರುವದು ವಿಪರ್ಯಾಸವೆ ಸರಿ ಯನ್ನುವ ಅನುಮಾನ ಜನಗಳಲ್ಲಿ ಮೂಡಿದೆ.ಇನ್ನಾದರೂ ತಾಲೂಕಿನಲ್ಲಿ ಓಸಿ ಮಟ್ಕಾ ದಂದೆಗೆ ಕಡಿವಾಣ ಬೀಳುತ್ತಾ ಕಾದು ನೋಡ್ಬೇಕಾಗಿದೆ.
