
ಉದಯವಾಹಿನಿ, ಯಾದಗಿರಿ : ಕೆಂಭಾವಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಅಕ್ರಮ ಕಟ್ಟಡ ನಿರ್ಮಿಸುತ್ತಿರುವ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರೋ. ಬಿ. ಕೃಷ್ಣಪ್ಪ ನವರು ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯ ಪಕ್ಕದ ಸರ್ವೆ ನಂ. 348ರಲ್ಲಿ ಯಾವುದೇ ಟೌನ್ ಪ್ಲಾನಿಂಗ್ ಮತ್ತು ಎನ್.ಎ. ಇಲ್ಲದೇ ಮಳಿಗೆಗಳ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಸರ್ಕಾರದ ನಿಯಮನುಸಾರ ಯಾವುದೇ ಎನ್.ಎ. ಮತ್ತು ಟೌನ್ ಪ್ಲಾನಿಂಗ್ ಇಲ್ಲದೇ ಕಟ್ಟಡಗಳಿಗೆ ಯಾವುದೇ ರೀತಿಯ ಅನುಮತಿ ಮತ್ತು ಪರವಾನಿಗೆ ನೀಡಬಾರದೆಂದು ನಿಯಮವಿದ್ದರೂ ಕೂಡ ಇದನ್ನು ಉಲ್ಲಂಘಿಸಿ ಸದರಿ ಕೆಂಭಾವಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಷ್ಟು ಲಂಚ ಪಡೆದುಕೊಂಡು ಸದರಿ ಸರ್ವೆ ನಂಬರಿನಲ್ಲಿ ಮಳಿಗೆಗಳನ್ನು ನಿರ್ಮಿಸುವುದಕ್ಕೆ ಅನುಮತಿ ನೀಡಿದ್ದಾರೆ. ಎಂದು DSS ಜಿಲ್ಲಾ ಸಂಚಾಲಕರಾದ ನಿಂಗಣ್ಣ ಬೋನಾಳ್ ಹೇಳಿದರು.
ಕೂಲಕುಂಷವಾಗಿ ಪರಿಶೀಲಿಸಿ ಹಾಗೂ ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಸದರಿ ಕೆಂಭಾವಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕು ಹಾಗೂ ಅಕ್ರಮ ಕಟ್ಟಡ ನಿರ್ಮಿಸುತ್ತಿರುವ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಬೇಕು. ಒಂದು ವೇಳೆ ಈ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು DSS ಪದಾಧಿಕಾರಿಗಳು ಆಗ್ರಹಿಸಿದರು.ಈ ಸಂಧರ್ಭದಲ್ಲಿ ರಮೇಶ ಪೂಜಾರಿ, ಹೆಚ್. ಆರ್. ಬಡಿಗೇರ, ಸದಾಶಿವ ದೊಮ್ಮನಹಳ್ಳಿ, ಶಿವಣ್ಣ ನಾಗರಾಳ, ನಾಗು ಗೋಗಿಕೇರಾ, ಮಾನಪ್ಪ ತೆಳಗಿ, ಬಸವರಾಜ ನಾಟೇಕ, ಸೋಮು,ಅನಿಲ ಕುಮಾರ ಇತರರು ಇದ್ದರು.
