
ಉದಯವಾಹಿನಿ, ಇಂಡಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ನ. 1 ರಂದು ರೋಗಿ ನಿಧನ ಹೊಂದಿದ ಮಹಿಳೆ ಸಾವಿನ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸಿಇಒ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಇಂಡಿ ಆಸ್ಪತ್ರೆಯಲ್ಲಿ ಡಯಾಲಸಿಸ್ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿದ್ದ 35 ವರ್ಷದ ಬಿಸ್ಮಿಲ್ಲಾ ಸೈಪನ್ ಸಾಬ ನದಾಫ್ ಸಾವಿನ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ,ಜಿಲ್ಲಾ ಶಾಸ್ತ್ರ ಚಿಕಿತ್ಸಕ, ನೆಪ್ರೋಲಾಜಿಸ್ಟ ಫಿಜಿಸಿಯನ್,ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಸಹಾಯಕ ಆಡಳಿತ ಅಧಿಕಾರಿ ಒಳಗೊಂಡ ತಂಡವನ್ನು ರಚಿಸಿದ್ದು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ.ಈ ಮಧ್ಯೆ ಆರೋಪಿ ಬಸವರಾಜ ಇವರ ಮೇಲೆ ಎಫ್ ಐ ಆರ್ ಆಗಿದ್ದು ತನಿಖೆ ಮುಂದುವರೆದಿದೆ ಎಂದು ಸಿಪಿಐ ರತನಕುಮಾರ ಜಿರಗಿಹಾಳ ತಿಳಿಸಿದ್ದಾರೆ. ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಬಸವರಾಜ್ ಹುಬ್ಬಳ್ಳಿ ಧಿಡೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಲ್ಲಿನ ವೈದ್ಯ, ಸಿಬ್ಬಂದಿಗಳ ವಿರುಧ್ಧ ಹರಿಹಾಯ್ದರು.
ಅವರು ಬರುವ ಪೂರ್ವದಲ್ಲಿಯೇ ಮುಖ್ಯ ವೈದ್ಯಾಧಿಕಾರಿಗಳಿಗೆ ತಾವು ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ ಸಹ ಹಲವು ಸಿಬ್ಬಂದಿಗಳು, ವೈದ್ಯರು ಗೈರು ಹಾಜರಾಗಿದ್ದನ್ನು ಕಂಡು ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲು ತಿಳಿಸಿದರು.ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡ ಅವರು ಅಲ್ಲಿನ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು, ನೀವೆಲ್ಲ ಬದಲಾಗಬೇಕು. ಸರಿಯಾಗಿ ನಿಮ್ಮ ನಿಮ್ಮ ಕಾರ್ಯ ಮಾಡಬೇಕು. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಕೊಟ್ಟರು.ಅಧಿಕಾರಿಗಳು ಬಂದಾಗಲೂ ಆಸ್ಪತ್ರೆಯಲ್ಲಿ ವಿದ್ಯುತ್ ದೀಪ ಇರಲಿಲ್ಲ, ಡಯಾಲಿಸಿಸ್ ಕೋಣೆಯನ್ನು ಮುಚ್ಚಲಾಗಿತ್ತು, ಡಯಾಲಿಸಿಸ್ ಕೋಣೆ ತೆರೆಯಲು ಸುಮಾರು ಅರ್ಧ ಗಂಟೆಗಳ ಕಾಲ ಡಿಹೆಚ್‌ಓ ಕಾಯ್ದರು.
ಡಿಹೆಚ್‌ಓ ಮುಂದೆ ಆಸ್ಪತ್ರೆಯ ಸಮಸ್ಯೆಗಳನ್ನು ತೆರೆದಿಟ್ಟ ಸಾರ್ವಜನಿಕರು:
ಸಾರ್ವಜನಿಕರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಭೇಟಿ ಮಾಡಿ ಅಲ್ಲಿನ ಅವ್ಯವಸ್ಥೆಗಳಾದ ಸ್ವಚ್ಛತೆ, ವಿದ್ಯುತ್ ಇಲ್ಲದಿರುವುದು, ಬಾಣಂತಿಯರಿಗೆ ಬಿಸಿ ನೀರಿಲ್ಲ, ಬಾಣಂತನದ ನಂತರ ಅವರನ್ನು ಅಡ್ಮಿಟ್ ಮಾಡಿಕೊಳ್ಳಲ್ಲ, ಅವರಿಗೆ ಊಟ ನೀಡಲಾಗುತ್ತಿಲ್ಲ, ಯೂಎಸ್‌ಜಿ ಮಷೀನ್ ಪ್ರಾರಂಭವಾಗಿಲ್ಲ, ಆರೋಗ್ಯಧಿಕಾರಿಗಳು ಇನ್ನು 15 ದಿನಗಳ ಒಳಗಾಗಿ ಈ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಿ ಎಲ್ಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಾಗಿ ಬರವಸೆ ನೀಡಿದರು.
ಬುಧವಾರ ಡಯಾಲಿಸಸ್ ಚಿಕಿತ್ಸೆಗೆ ಬಂದ ಮಹಿಳೆಗೆ ಸಿಬ್ಬಂದಿ ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ್ದು ಮಹಿಳೆ ಸಾವನ್ನಪ್ಪಿದ್ದು ಅದಕ್ಕೆ ಏನು ಕ್ರಮ ಕೈಗೊಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಈಗಾಗಲೆ ಈ ಕುರಿತು ದೂರು ದಾಖಲಾಗಿ ತನಿಖೆ ನಡೆಯುತ್ತಿದೆ. ಮುಂದೆ ಈ ರೀತಿಯಾಗದಂತೆ ನಿಗಾ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಜೆ.ಎಂ. ಬೀಳಗಿ, ವೈದ್ಯರಾದ ವಿಪುಲ್ ಕೋಳೆಕರ್, ಅಮಿತ್ ಕೊಳೇಕರ್, ಜಗದೀಶ ಬಿರಾದಾರ, ವಿಕಾಸ ಸಿಂದಗಿ, ಸಂತೋಶ ಪವಾರ, ಶ್ರೀಮಂತ ತೋಳನೂರ, ಶಾಂತೇಶ ಹಿಪ್ಪರಗಿ, ಗಜಾಕೋಶ, ಶಿವಾಜಿ ಮಾನೆ, ಪ್ರವೀಣ ಕೆ, ಶಾಂತು ಹೊಸಮನಿ, ಗುರುರಾಜ ಪಾಟೀಲ, ಬಸವರಾಜ ಡವಳಗಿ ಸೇರಿದಂತೆ ಮತ್ತಿತರಿದ್ದರು.

