
ಉದಯವಾಹಿನಿ,ಚಿಂಚೋಳಿ: ಭಾಲ್ಕಿ ತಾಲ್ಲೂಕಿನ ವಕೀಲರ ಸಂಘದ ಮಹಿಳಾ ವಕೀಲರ ಮೇಲೆ ಕಾನೂನು ಬಾಹಿರವಾಗಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಅಧಿಕಾರಿಗಳು ಸೇವೆಯಿಂದ ಅಮಾನತು ಮಾಡುವಂತೆ ತಾಲ್ಲೂಕಾ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಆಗ್ರಹಿಸಿದರು.ಪಟ್ಟಣದ ಬಸ್ ನಿಲ್ದಾಣದ ಎದುರು ತಾಲ್ಲೂಕಾ ವಕೀಲರ ಸಂಘದಿಂದ ಭಾಲ್ಕಿ ವಕೀಲರ ಸಂಘದ ಮಹಿಳಾ ಸದಸ್ಯ ಕಾನೂನು ಬಾಹಿರ ಬಂಧನಕ್ಕೆ ಒಳಪಡಿಸಿದ್ದು ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು,ಪೋಲಿಸ್ ಅಧಿಕಾರಿಗಳು ರಾತೋರಾತ್ರಿ ಕಾನೂನು ಬಾಹಿರ ಮತ್ತು ನಿಯಮ ಬಾಹಿರವಾಗಿ ಅವರೊಂದಿಗೆ ವರ್ತನೆ ಮಾಡಿದ್ದು ಮಹಿಳೆಯರಿಗೆ ತಲೆ ತಗ್ಗಿಸುವಂತೆಯಾಗಿದೆ. ವಕೀಲ ಸದಸ್ಯ ಧನಲಕ್ಷ್ಮಿ ಬಳತೆ ವಿರುದ್ದ ಅಧಿಕಾರಿಗಳು ಕಾನೂನು ಬಾಹಿರ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೆಲಿಗೆ ಅಟ್ಟಿದ್ದು ಸಮಾಜಕ್ಕೆ ಹಾಗೂ ವ್ಯಯಕ್ತಿಕ ಘನತೆಗೆ ಪೆಟ್ಟಾಗಿದೆ ಅವರ ವೃತ್ತಿಗೆ ಚ್ಯುತಿ ಬಂದಿದೆ. ಪ್ರಕರಣ ಮಾಡಿದ ಅಧಿಕಾರಿಗಳಿಗೆ ಕೂಡಲೆ ವಜಾ ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಜಿ.ಕೆ ಗೋಖಲೆ,ಜಗನ್ನಾಥ ಗಂಜಗಿರಿ,ಸುದರ್ಶನ್ ಸಂತಾಲ,ಪ್ರವೀಣ ನಮಲಿಕರ,ಸುದರ್ಶನ್ ಬಿರಾದಾರ,ಶೇಖ್ ಭಕ್ತಿಯಾರ ಜಾಗೀರದಾರ,ಚಂದ್ರಶೇಟ್ಟಿ ಜಾಧವ,ವಿಜಯಕುಮಾರ,ಅರುಣ ಹೇಗ್ಡೆ,ಜಗನ್ನಾಥ ಅಗ್ನಿಹೋತ್ರಿ,ಡಿಕೆ ಚವ್ಹಾಣ,ನಂದಕುಮಾರ ಪಾಟೀಲ,ದೇವೀಂದ್ರಪ್ಪಾ, ಗಿರಿದಾರ,ರಾಜೇಂದ್ರಕುಮಾರ ವರ್ಮಾ,ಹಣಮಂತ ಹಿರೇಮನಿ,ಮಾಣಿಕ ಗುಲಗುಂಜಿ,ಸಂಜುಕುಮಾರ ಮೇತ್ರಿ,ಸೂರ್ಯಾಕಾಂತ,ವೈಜೀನಾಥ,ಶಶಿ ಕಾಂತ ಅಡಕಿ,ಸಿದ್ದಪ್ಪ,ಅನೇಕರಿದ್ದರು.
