
ಉದಯವಾಹಿನಿ, ಶಿಡ್ಲಘಟ್ಟ: ಝಿಕಾ ವೈರಸ್ ನಿಂದ ರಾಜ್ಯಾದ್ಯಂತ ತಲ್ಲಣಗೊಳ್ಳುತ್ತಿದೆ. ಸಾರ್ವಜನಿಕರು ಯಾವುದೇ ಆತಂಕ ಬೇಡ ಈ ವೈರಸ್ ಇನ್ನೂ ಸೊಳ್ಳೆಗಳಲ್ಲಿ ಮಾತ್ರ ಕಂಡು ಬಂದಿದೆ ಮನುಷ್ಯರಿಗೆ ಬರದೇ ಇರುವ ರೀತಿಯಲ್ಲಿ ಮುನ್ನೆಚ್ಚರಿಕೆಯಿಂದ ಜಾಗೃತವಹಿಸಲಾಗುತ್ತಿದೆ ಎಂದು ಶಾಸಕ ಬಿಎನ್ ರವಿಕುಮಾರ್ ತಿಳಿಸಿದರು.ನಗರದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಝಿಕಾ ವೈರಸ್ ಪತ್ತೆಯಾಗಿರುವುದರಿಂದ ರಾಜ್ಯಾದ್ಯಂತ ತಲ್ಲಣಗೊಳ್ಳುತ್ತಿದೆ. ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದ ಸುತ್ತ ಮುತ್ತಲಿನ ಜನರ ಬಳಿ ಹೋಗಿ ವೈರಸ್ ಬಗ್ಗೆ ಅರಿವು ಮೂಡಿಸಲಾಯಿತು. ಈ ವೈರಸ್ ನ್ನು ಹೋಗಲಾಡಿಸಲು ಸಾರ್ವಜನಿಕರು ಸಹಕರಿಸಬೇಕು. ತಮ್ಮ ತಮ್ಮ ಮನೆಯ ಸುತ್ತಮುತ್ತಲೂ ನೀರು ನಿಲ್ಲದಿರುವ ಹಾಗೆ ಮತ್ತು ಶೇಖರಿಸಿಟ್ಟಿರುವ ನೀರಿನ ಮೇಲೆ ಮುಚ್ಚಳಗಳನ್ನು ಸೂಕ್ತವಾದ ರೀತಿಯಲ್ಲಿ ಜೋಪಾನ ಮಾಡಬೇಕು. ಹಾಗೆಯೇ ತಾಲೂಕಿನಾದ್ಯಂತ ಪ್ರತಿ ಅಂಗನವಾಡಿ ಹಾಗೂ ಸರ್ಕಾರಿ,ಖಾಸಗಿ ಶಾಲೆಯ ಸುತ್ತಮುತ್ತ ಹಾಗೂ ವಿದ್ಯಾರ್ಥಿ ನಿಲಯಗಳ ಬಳಿ ನೀರು ಶೇಖರಿಸುವ ಟ್ಯಾಂಕ್ ಗಳು ಸ್ವಚ್ಛವಾಗಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಡಿಪಿಓ ಅವರಿಗೆ ಆದೇಶ ನೀಡಿದರು.ಮನುಷ್ಯನಲ್ಲಿ ಝಿಕಾ ವೈರಸ್ ಕಂಡು ಬಂದರೆ ಅದು ಈ ಹಿಂದೆ ಬಂದಿರುವಂತಹ ಚಿಕನ್ ಗುನ್ಯಾ ಡೆಂಗ್ಯೂ ಅಂತ ಜ್ವರಗಳ ರೀತಿಯಲ್ಲಿ ಕಂಡು ಬರುತ್ತದೆ ನಾವು ಈಗಾಗಲೇ ಜ್ವರ ಇರುವಂತಹ ವ್ಯಕ್ತಿಗಳ ರಕ್ತವನ್ನು ಪಡೆದು ಲ್ಯಾಬ್ ಗೆ ಕಳುಹಿಸಲಾಗಿದೆ ಹಾಗೂ ಇಲ್ಲಿನ ಸೊಳ್ಳೆಗಳನ್ನು ರಕ್ತವನ್ನು ಮುಂಬೈನ ಕೇಂದ್ರ ಕಚೇರಿಗೆ ಪರೀಕ್ಷಿಸಲು ಕಳುಹಿಸಲಾಗಿದೆ ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಬೇಡ ಮುನ್ನೆಚ್ಚರಿಕೆ ಇರಲಿ.ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಗರಸಭೆಯ ಪೌರಾಯುಕ್ತರು ತಮ್ಮ ತಮ್ಮ ವ್ಯಾಪ್ತಿಗೆ ಬರುವಂತಹ ಪ್ರದೇಶಗಳಲ್ಲಿ ಚರಂಡಿಗಳು ರಸ್ತೆ ಬದಿ ಹಾಗೂ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ನಿಮ್ಮ ಮೇಲಿರುತ್ತದೆ ಹಾಗೆಯೇ ಸಾರ್ವಜನಿಕರು ಸಹ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಈ ಝಿಕಾ ವೈರಸ್ ಅನ್ನು ತಡೆಯೋಣ ಎಂದು ತಿಳಿಸಿದರು.ಝಿಕಾ ವೈರಸ್ ಕೇವಲ ಸೊಳ್ಳೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಎಂಟಮಾಲಾಜಿಸ್ಟ್ ಎಂಬ ಕೀಟ ತಜ್ಞರಿಂದ ಮಾಹಿತಿ ಲಭ್ಯವಾಗಿರುತ್ತದೆ. ಇದರ ಬೆನ್ನಲ್ಲೆ ನಾವು ತಲಕಾಯಲಬೆಟ್ಟ ಗ್ರಾಮಕ್ಕೆ ಬೇಟಿ ನೀಡಿ ಅಲ್ಲಿನ ಐದು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಝಿಕಾ ವೈರಸ್ ಯಾವ ರೀತಿ ಇರುತ್ತದೆ. ಯಾವ ರೀತಿ ರೋಗ ಲಕ್ಷಣಗಳು ಕಾಸಿಕೊಳ್ಳುತ್ತವೆ. ತಕ್ಷಣ ಏನು ಮಾಡಬೇಕು ಎಂದು ಸಾರ್ವಜನಿಕರಲ್ಲಿ ಝಿಕಾ ವೈರಸ್ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ದೈರ್ಯವನ್ನು ತುಂಬಿದ್ದೇವೆ. ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಯ ಸುತ್ತಮುತ್ತಲೂ ಇರುವ ಹಳ್ಳಿಗಳಿಗೆ ಸೊಳ್ಳೆಗಳು ಹರಡದಂತೆ ಯಂತ್ರಗಳ ಮೂಲಕ ಔಷಧಿಯನ್ನು ಸಿಂಪರಣೆ ಮಾಡಿಸುತ್ತೇವೆ. ಡಾ. ವೆಂಕಟೇಶ್ ಮೂರ್ತಿ ತಾಲ್ಲೂಕು ಆರೋಗ್ಯಾಧಿಕಾರಿ.ಝಿಕಾ ವೈರಸ್ ಕಂಡು ಬಂದಿರುವಂತಹ ಪ್ರದೇಶಗಳಲ್ಲಿ ಮೊದಲಿಗೆ ಸ್ವಚ್ಚತೆಯನ್ನು ಕಾಪಾಡಲು ಆದ್ಯತೆ ನೀಡಲಾಗುತ್ತದೆ. ಸೊಳ್ಳೆಗಳು ಉತ್ಪತ್ತಿಯಾಗುವಂತಹ ಸ್ಥಳಗಳಾದ ಚರಂಡಿ,ಮೋರಿ,ನೀರಿನ ಟ್ಯಾಂಕ್ ಗಳ ಬಳಿ ನೀರು ನಿಲ್ಲದಂತೆ ಹಾಗೂ ಸ್ವಚ್ಚತೆಯನ್ನು ಕಾಪಾಡಲು ಸಾರ್ವಜನಿಕರಿಗೆ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ.ಎಸ್ ನಾರಾಯಣ.ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ್ ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಜಗದೀಶ್ , ಸಿಡಿಪಿಓ ನೌತಾಜ್ , ನಗರ ಸಭೆ ಆರೋಗ್ಯ ನಿರೀಕ್ಷಕರಾದ ಮುಕ್ತಾಂಭಾ , ಪಿ.ಮುರಳಿ ,ಸೇರಿದಂತೆ ಮುಖಂಡರಾದ ಬಂಕ್ ಮುನಿಯಪ್ಪ ,ತಾದೂರು ರಘು ,ಎಸ್.ಎಂ.ರಮೇಶ್ ,ಚೀಮನಹಳ್ಳಿ ಗೋಪಾಲ್ , ನವೀನ್ ಮುಂತಾದವರು ಹಾಜರಿದ್ದರು.

