
ಉದಯವಾಹಿನಿ, ಮುದ್ದೇಬಿಹಾಳ ; ನ 5 ರಂದು ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯ ಮದರಿ ಕಲ್ಯಾಣ ಮಂಟಪದಲ್ಲಿ ತಾಲೂಕ ಮಂಟಪ ಲೈಟ್ ಸೌಂಡ್ ಮತ್ತು ಡೆಕೋರೇಟರ್ಸ ಅಸೋಸಿಯನ್ ನ ತಾಲೂಕು ಮಟ್ಟದ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದ ಯಶಸ್ವಿಗೆ ತಾಲೂಕಿನ ಎಲ್ಲಾ ಗುರು ಹಿರಿಯರು ಮತ್ತು ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕೆಂದು ಸಂಘದ ಉಪಾಧ್ಯಕ್ಷ ಮಧುಚಂದ್ರಶೇಖರ ನಾಲತವಾಡ ಹೇಳಿದರು ಮಾಧ್ಯಮಗಳಿಗೆ ಕಾರ್ಯಕ್ರಮದ ಮಾಹಿತಿಯನ್ನು ನೀಡಿದ ಅವರು ಎಲ್ಲಾ ನಮ್ಮ ವೃತ್ತಿ ಭಾಂದವರು ಒಂದಾಗಿ ಈ ಕಾರ್ಯಕ್ರಮ ಮಾಡುತ್ತಿದ್ದು ನಮ್ಮ ಸಂಘದ ದೊಡ್ಡ ಅಥವಾ ಚಿಕ್ಕ ಸದಸ್ಯರಿಗೆ ಯಾವುದೇ ರೀತಿಯ ಸಮಸ್ಯೆ ಬಂದಾಗ ಅವರ ಬೆಂಬಲಕ್ಕೆ ಸಂಘ ಇರುತ್ತದೆ ಆ ಕಾರಣಕ್ಕಾಗಿ ಈ ಸಂಘ ಸ್ಥಾಪನೆ ಮಾಡಿದ್ದೇವೆ ಸಂಘದ ಸಂಘಟನೆಗೆ ಎಲ್ಲರ ಸಹಕಾರ ಬೇಕು ಹೀಗಾಗಿ ಈ ತಾಲೂಕ ಮಟ್ಟದ ಸಮಾವೇಶದಲ್ಲಿ ಎಲ್ಲಾ ಪಾಲ್ಗೊಳ್ಳಬೇಕಿದೆ ಎಂದರು. ಖಜಾಂಚಿ ಸಿದ್ದು ಹೆಬ್ಬಾಳ ಈ ಸಮಾವೇಶದಲ್ಲಿ ರಾಜ್ಯ ಮತ್ತು ಅಂತ ರಾಜ್ಯದದಿಂದ ನಮ್ಮ ಸಂಘಟನೆಗೆ ಸಂಬಂಧಿಸಿದಂತೆ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಮತ್ತು ನುರಿತ ವೃತ್ತಿ ಬಾಂಧವರಿಂದ ಮಾರ್ಗದರ್ಶನ ಉಪನ್ಯಾಸ ನೀಡಲಾಗುತ್ತದೆ ಇದರ ಸದುಪಯೋಗ ಪಡೆಯಬೇಕು.
ಈ ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಕುಟುಂಬ ಸಮೇತ ಭಾಗವಹಿಸಬೇಕೆಂದು ಹೇಳಿದರು. ಸಂಘದ ಅಧ್ಯಕ್ಷ ಬಸಯ್ಯಾ ಮಠ ,ಪ್ರಧಾನ ಕಾರ್ಯದರ್ಶಿ ವಿರೇಶ ಢವಳಗಿ ನಮ್ಮ ಸಂಘದ ತಾಲೂಕು ಮಟ್ಟದ ಸಮಾವೇಶದ ಸಮಾರಂಭದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಹಿರೇಮಠ ಸಂಸ್ಥಾನದ ಡಾ| ಚನ್ನವೀರದೇವರು ಹಾಗೂ ತಾಳಿಕೋಟಿ ಖಾಸ್ಗತೇಶ್ವರಮಠದ ಶ್ರೀ ಸಿದ್ದಲಿಂಗದೇವರು ವಹಿಸಲಿದ್ದು ಉದ್ಘಾಟನೆ ಶಾಸಕ ಸಿ.ಎಸ್ ನಾಡಗೌಡ, ಧ್ವಜಾರೋಹಣ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ, ಅಧ್ಯಕ್ಷತೆ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಮಾನಕರ,ಉತ್ತರ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಅಮರೇಶ ಹಿರೇಮಠ, ಗಣ್ಯರಾದ ಎಂ.ಬಿ ನಾವದಗಿ, ಎಂ.ಎಸ್ ಪಾಟೀಲ್, ಪ್ರಭುಗೌಡ ದೇಸಾಯಿ ಅಪ್ಪು ಮದರಿ,ಸಿ.ಬಿ ಅಸ್ಕಿ, ಪ್ರಭುರಾಜ ಕಲಬುರಗಿ ,ಸಿ ಪಿ ಸಜ್ಜನ,ಮತ್ತು ವಿಶೇಷ ಆಹ್ವಾನಿತರಾಗಿ ರಾಜ್ಯ ಅಂತರರಾಜ್ಯ, ವಿವಿಧ ಜಿಲ್ಲೆಗಳಿಂದ ಮಟಂಪ ಡೆಕೋರೇಟರ್ಸಗಳು ಆಗಮಿಸಿಲಿದ್ದಾರೆ ಮತ್ತು ಸಮಾವೇಶದಲ್ಲಿ 160 ಕ್ಕೂ ಹೆಚ್ಚು ತಾಲೂಕಿನ ಮಂಟಪ ಲೈಟ್ ಡೆಕೋರೇಟರ್ಸ ಗಳನ್ನು ಅಭಿನಂದಿಸಲಾಗುತ್ತದೆ ಎಂದರು.ಈ ವೇಳೆ ಖಾಜಾಸಬ ಕಂಡಗೂಳಿ ಉಪಸ್ಥಿತರಿದ್ದರು.
