
ಉದಯವಾಹಿನಿ,ಶಿಡ್ಲಘಟ್ಟ: ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಎಸ್.ಗೊಲ್ಲಹಳ್ಳಿಯ ಸರ್ವೆ ನಂ 91ರಲ್ಲಿ ಹಣದಾಸೆಗೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಮಾಲು ವಶಕ್ಕೆ ಪಡೆದುಕೊಂಡಿದ್ದಾರೆ.
ದಿಬ್ಬೂರಹಳ್ಳಿ ಠಾಣಾ ಸಿಬ್ಬಂದಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಠಾಣಾಧಿಕಾರಿಗಳು ಹಾಗೂ ಉಪ ತಹಶೀಲ್ದಾರ್ ಗೆ ನೋಟಿಸ್ ನೀಡಿ ಬರಮಾಡಿಕೊಂಡು, ಅಕ್ರಮವಾಗಿ ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಸೊಣ್ಣಪ್ಪ ಬಿನ್ ಗುರುಶಾಂತಪ್ಪ ಸಾದಲಿ ಗ್ರಾಮದ ವ್ಯಕ್ತಿಯ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಸ್ಥಳದಲ್ಲಿ ದಾಳಿ ಮಾಡಿ 970 ಗ್ರಾಂ ತೂಕದ ಸುಮಾರು 27,000 ರೂ ಬೆಲೆಬಾಳುವ 6 ಗಾಂಜಾ ಗಿಡಗಳನ್ನು ಆರೋಪಿ ಸಹಿತ ಅಮಾನತ್ತು ಪಡಿಸಿಕೊಂಡು, ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಕೈಕೊಂಡಿದ್ದಾರೆ.ಈ ಸಂದರ್ಭದಲ್ಲಿ ಉಪ ತಹಶಿಲ್ದಾರ್ ಶ್ರೀನಿವಾಸ್ ನಾಯ್ಡು, ದಿಬ್ಬೂರಳ್ಳಿ ಪೊಲೀಸ್ ಠಾಣಾ ಪಿಎಸ್ಐ ರಾಜೇಶ್ವರಿ , ಮುಖ್ಯ ಪೇದೆಗಳಾದ ಮಂಜುನಾಥ್, ಲೋಕೇಶ್, ಪ್ರತಾಪ್, ಗುಪ್ತ ಮಾಹಿತಿ ಸಿಬ್ಬಂದಿ ಕೃಷ್ಣಪ್ಪ ದಾಳಿ ನಡೆಸಿದ್ದಾರೆ.
