????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಉದಯವಾಹಿನಿ,ಶಿಡ್ಲಘಟ್ಟ: ಮುಖ್ಯಮಂತ್ರಿಗಳು ತಾಲ್ಲೂಕಿನಲ್ಲಿ ಬರ ಘೋಷಣೆ ಮಾಡಿ, ಹಂಪಿಯಲ್ಲಿ ಕುಣಿತ ಮಾಡಿ ತಾಳ ತಪ್ಪಿದ್ದೀರಿ, ನೀವು ತಾಳ ತಪ್ಪಿಲ್ಲ ಆದರೆ ಸರ್ಕಾರ ತಾಳ ತಪ್ಪಿದೆ ಎಂದು ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸರ್ಕಾರದ ವಿರುದ್ಧ ಗುಡುಗಿದರು. ಬಿಜೆಪಿ ಪಕ್ಷದ ತಂಡದಿಂದ ಬರ ಅಧ್ಯಯನ ವೀಕ್ಷಣೆಗೆ ತಾಲ್ಕೂಕಿ ಇದ್ಲೂಡು ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಭರ ಪರೀಶಿಲಿಸಿ ನಂತರ ನಗರದ ಬಿಜೆಪಿ ಸೇವಾಸೌದದಲ್ಲಿ ಸುದ್ದಿಗೋಷ್ಡಿ ನಡೆಸಿ ಮಾತನಾಡಿದರು.ಮುಖ್ಯಮಂತ್ರಿಗಳೇ ಬರ ಬಂದು ಬರಗಾಲ ಎದುರಿಸುತ್ತಿದ್ದರೆ ಎಂದಾದರೂ ನೀವಾಗಲಿ ಅಥವಾ ನಿಮ್ಮ ಸಚಿವರಾಗಲಿ ಒಂದು ದಿನ ರೈತರ ಕಷ್ಟಗಳನ್ನು ಕೇಳಿದ್ದೀರಾ,ನೀವು ಡಿನ್ನರ್ ಬ್ರೇಕ್ ಪಾಸ್ಟ್ ನಿಂದ ಹೊರಗಡೆ ಬಂದು ರೈತರ ಸಂಕಷ್ಟಕ್ಕೆ ಸ್ಪಂದಿಸಿ. ರಾಜ್ಯ ಸರ್ಕಾರ ಜನಪರ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ರೈತರು ಸಾಯ್ತಿದ್ದರೆ ನೀವು ಸುರ್ಜೆವಾಲ ಮಾತಿಗೆ ತಕ್ಕ ಹಾಗೆ ಹೆಜ್ಜೆ ಹಾಕಿ ಕುಣಿಯುತ್ತಿದ್ದಿರಿ,ಸರ್ಕಾರದ ಖಜಾನೆಯ ಕೀಗಳನ್ನು ವೇಣುಗೋಪಾಲ್ ಮತ್ತು ಸುರ್ಜೆವಾಲ ಅವರಿಗೆ ನೀಡಿ ಕೈ ಕಟ್ಟಿ ಕೂತಿದ್ದಿರಿ. ಸದನದಲ್ಲಿ ಶಾಸಕರನ್ನ ಲೆಕ್ಕ ,ವ್ಯಾಕರಣ ಮೇಷ್ಟ್ರು ಅಲ್ಲದೆ,ಲಾಯರ್ ಆಗಿ ಕೆಲಸ ಮಾಡುವ ಸಿದ್ದರಾಮಯ್ಯ ನವರು ರೈತರ ಪರನೂ ಕೆಲಸ ಮಾಡಬೇಕು ಎಂದು ಲೇವಡಿ ಮಾಡಿದರು.ನಿಮ್ಮ ತಾಳಕ್ಕೆ ಕೇಂದ್ರ ಸರ್ಕಾರ ಕುಣಿಯುತ್ತಿಲ್ಲ ಎಂದು ಕೇದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.
ಖಜಾನೆ ಖಾಲಿಯಾಗಿಲ್ಲ ಅಂದ್ರೆ ರೈತರಿಗಾಗಿ ಐದು ಸಾವಿರ ಕೋಟಿ ಬಿಡುಗಡೆ ಮಾಡಿ ,ಇಲ್ಲ ಅಂದ್ರೆ ನಮ್ಮತ್ರ ಖಜಾನೆ ಖಾಲಿಯಾಗಿದೆ ಅಂತ ಒಪ್ಪಿಕೊಂಡು ನೆರವು ಕೊಡಿ ಅಂತ ಕೇಂದ್ರ ಸರ್ಕಾರದ ಬಳಿ ಕೇಳೋಣ. ನಮ್ಮ ಖಜಾನೆ ಖಾಲಿಯಾಗಿದೆ ಅದಕ್ಕೆ ಪಂಚಾಯಿತಿಗೊಂದು ಬಾರು ನೀಡಿದ್ದೀರಿ ಮುಂದೆ ಊರಿಗೊಂದು ಬಾರ್ ತೆರೆಯಲು ಸೂಚನೆ ನೀಡ್ತಿರಿ ಎಂದು ಕಿಡಿ ಕಾರಿದರು. ಮೈಸೂರು ದಸರಾದಲ್ಲಿ ಕಲಾವಿದರಿಗೆ ಕೊಟ್ಟ ಚೆಕ್ ಬೌನ್ಸ್ ಆಗಿದೆ. ಇತರೆ ರಾಜ್ಯಗಳ ಮುಂದೆ ರಾಜ್ಯದ ಜನತೆ ತಲೆ ತಗ್ಗಿಸಬೇಕಿದೆ. ಕಲಾವಿದರ ಬಳಿಯು ಲಂಚ ಕೇಳಿದೆ ಮೈಸೂರು ದಸರಾದಲ್ಲಿ ಕಲಾವಿದರಿಗೆ ಚೆಕ್ ಬೌನ್ಸ್ ಆಗಿದೆ. ಪದ್ಮಶ್ರೀ ಪುರಸ್ಕೃತ ವ್ಯಕ್ತಿಗಳ ಬಳಿ ಲಂಚ ಕೇಳ್ತಾರೆ ಅಂದ್ರೆ ನಿಮ್ಮ ಸರ್ಕಾರಕ್ಕೆ ಏನು ಹೇಳಬೇಕು. ಉಚಿತ ವಿದ್ಯುತ್ ಕೊಡ್ತಿವಿ ಅಂತ ಹೇಳಿ ದಿನದಲ್ಲಿ 7 ಗಂಟೆ ವಿದ್ಯುತ್ ಕೊಡಬೇಕಾಗಿತ್ತು, ಕೇವಕ 5 ಗಂಟೆ ಕೊಡ್ತಿದ್ದೀರಿ ಅದರಲ್ಲೂ ಸರಿಯಾಗಿ ಎರಡು ಮೂರು ಗಂಟೆ ವಿದ್ಯುತ್ ಕೊಡ್ತಿರಿ. ನಿಮಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ ಅಂದ್ರೆ ಅಧಿಕಾರ ಬಿಟ್ಟು ತೊಲಗಿ ಎಂದರು. ರೈತರಿಗೆ ಬೆಳೆ ಬೆಳೆಯಲು ನೀರಿಲ್ಲ, ಕನ್ನಂಬಾಡಿ, ಹಾರಂಗಿ,ಆಲಮಟ್ಟಿ ಕಬಿನಿ ಎಲ್ಲಾ ಡ್ಯಾಯಂಗಳಲ್ಲಿ‌ ನೀರು ಖಾಲಿ, ಬೆಂಗಳೂರಿನಲ್ಲಿ ಕುಡಿಯಕ್ಕೆ ನೀರಿಲ್ಲ ಈಗ್ಲೇ ಈಗಾದರೆ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಹೇಗೆ ಎಂಬುದನ್ನ ನೀವೆ ಕಲ್ಪನೆ ಮಾಡಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ,ಸಂಸದ ಎಸ್.ಮುನಿಸ್ವಾಮಿ ,ವಿಧಾನ ಪರಿಷತ್ತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳು ಕುಂಟೆ ಕೃಷ್ಣ ಮೂರ್ತಿ,ಸೀಕಲ್ ರಾಮಚಂದ್ರ ಗೌಡ,ಮಾಜಿ ಶಾಸಕ ಎಂ.ರಾಜಣ್ಣ ,ಸಿವಿ ಲೋಕೇಶ್, ವೇಣುಗೋಪಾಲ್, ಮುನಿರಾಜು ,  ಸಂಪಂಗಿ, ಜಿಲ್ಲಾ ವಕ್ತಾರ ರಮೇಶ್ ಬಾಯರಿ, ಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡ,ಸೀಕಲ್ ಆನಂದಗೌಡ,ಬಿಜೆಪಿ ಕಾರ್ಯಕರ್ತರು ಹಾಗೂ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!