ಉದಯವಾಹಿನಿ,ಸಿಂಧನೂರು : ತಾಲೂಕಿನ ಕಲಮಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಿರೇಭೇರಗಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಸುಮಾರು 84 ಲಕ್ಷ ರೂ ವೆಚ್ಚದಲ್ಲಿ ಶಾಸಕ ಬಸನಗೌಡ ಪಾಟೀಲ್ ತುರುವಿಹಾಳ ಅವರು ಉದ್ಘಾಟನೆ ನೆರವೇರಿಸಿ ನಂತರ ಮಾತನಾಡಿದ ಅವರು ಸ್ಥಳೀಯ ಎಲ್ಲರ ಜನರು ಸಹಕಾರ ದಿಂದ ಕಾಮಗಾರಿಗಳನ್ನು ಗುಣಮಟ್ಟದ ಕಾಮಗಾರಿಗಳು ಕೆಲಸವನ್ನು ಮಾಡುಬೇಕು ಮತ್ತು ಯಾವುದೇ ಕಾರಣಕ್ಕೂ ಕಂಪ್ಲೀಟ್ ಬರದಂತೆ ಹಾಗೂ ನಿರ್ದಿಷ್ಟ ಸಮಯದಲ್ಲಿ ಕಾಮಗಾರಿ ಕೆಲಸ ಪೂರ್ಣಗೊಳಿಸಿ ಎಂದು ಅಧಿಕಾರಿಗಳು ಸೂಚನೆ ನೀಡಿದರು ಮನೆ ಮನೆಗೆ ನೀರಿನ ವ್ಯವಸ್ಥೆಯಾಗಿದ್ದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಹಕಾರ ನೀಡಿ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು ಈ ಸಂದರ್ಭದಲ್ಲಿ ಬಾಪುಗೌಡ ದೇವರ ಮನಿ ತುರ್ವಿಹಾಳ್, ಭೀಮಣ್ಣ ಉಪ್ಪಲದೊಡ್ಡಿ, ಅಮರೇಶ್ ಹತ್ತಿಗುಡ್ಡ, ಆಂಜನೇಯ ನಾಯಕ ಗ್ರಾಮ ಪಂಚಾಯತಿ ಸದಸ್ಯರು, ನಿಂಗಪ್ಪ ನ್ಯಾಯಾಕೋಡಿ ಗ್ರಾಮ ಪಂಚಾಯತಿ ಸದಸ್ಯರು, ದ್ಯಾಮಣ್ಣ ಅಂಗಡಿ, ಮಾನಪ್ಪ ಸಾಲಿತಾಳ,
ವೆಂಕಟೇಶ್ ದೊಡ್ಡಮನಿ, ಯಮನೂರ ಭೇರಗಿ, ಶರಣಪ್ಪ ನ್ಯಾಯಕೋಡಿ, ಪಂಪಾಪತಿ ಮಾಡಿಸಿರವಾರ, ಮಹಾಂತೇಶ್ ಭೇರಗಿ, ಗ್ರಾಮಪಂಚಾಯಿತಿ ಅಧಿಕಾರಿ ಹುಚ್ಚಪ್ಪ ಉಪ್ಪಲದೊಡ್ಡಿ ಹಾಗೂ ಗ್ರಾಮದ ಮುಖಂಡರು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!