
ಉದಯವಾಹಿನಿ,ಗಂಗಾವತಿ : ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘದ ವತಿಯಿಂದ 31ನೇ ಸಂಸ್ಥಾಪನ ದಿನಾಚರಣೆ ಹಾಗೂ ಕರ್ನಾಟಕ 50ರ ಸಂಭ್ರಮಾಚರಣೆ ಅಂಗವಾಗಿ ರಾಜ್ಯಮಟ್ಟದ ಸಾಧಕರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ-2023ರ ಕಾರ್ಯಕ್ರಮವನ್ನು ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ನಂತರ ಮಾತನಾಡಿ ರಾಜ್ಯದಲ್ಲಿ ನದಾಫ್ /ಪಿಂಜಾರ ಸಮುದಾಯದ ಬಗ್ಗೆ ಕುಲಶಾಸ್ತ್ರ ಅಧ್ಯಯನ ಮಾಡಿ, ಅತಿ ಶೀಘ್ರದಲ್ಲಿ ಸರ್ಕಾರದಿಂದ ಕುಲಶಾಸ್ತ್ರ ಅಧ್ಯಯನ ಮಾಡಲು ಅಗತ್ಯವಿದ್ದು, ದಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಆರಂಭವಾಗಲಿದೆ. ಇನ್ನೂ ಒಂದು ತಿಂಗಳ ಒಳಗಾಗಿ ಕಾಂತರಾಜ್ ವರದಿ ಜಾರಿಯಿಂದ ನದಾಫ್/ ಪಿಂಜಾರ ಸೇರಿ ಹಲವು ಸಮಾಜಗಳಿಗೆ ಶೈಕ್ಷಣಿಕ, ಆರ್ಥಿಕ,ರಾಜಕೀಯ, ಸಾಮಾಜಿಕ ಮುನ್ನಡೆ ಸಿಗುತ್ತದೆ. ನದಾಫ್ /ಪಿಂಜಾರ ಸಮುದಾಯದ ಅಭಿವೃದ್ಧಿ ಪರ್ವಕ್ಕೆ ಕಾಲ ಕೂಡಿ ಬಂದಿದೆ. ಇನ್ನು ಕೆಲವು ದಿನಗಳಲ್ಲಿ ಈ ಸಮುದಾಯದ ನಿಗಮ ಮಂಡಳಿ ರಚನೆ ಯಾಗಲಿದೆ ಎಂದು ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಸಂದರ್ಭದಲ್ಲಿ ಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೆಬ್ಬಾಳ, ಮೌಲಾನಾ ಅಹಮದ್ ಹುಸೇನಿ ಖಾದ್ರಿ ಅರಾಳು , ಶಾಸಕ ಜನಾರ್ಧನ್ ರೆಡ್ಡಿ, ಮಾಜಿ ಸಚಿವ ಇಕ್ಬಾಲ್ ಮಾಜಿ ಸಚಿವಅನ್ಸಾರಿ, ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಬಸವರಾಜ್ ದಡೇಸುಗೂರು, ಮಾಜಿ ವಿಧಾನಸಭಾ ಸದಸ್ಯ ಎಚ್.ಆರ್.ಶ್ರೀನಾಥ್, ಸಂಘದ ರಾಜ್ಯದ್ಯಕ್ಷ ಜಲೀಲ್ ಸಾಬ್, ಸಂಘದ ರಾಜ್ಯ ಸಲಹೆ ಸಮಿತಿ ಸಲಹೆಗಾರ ಹೆಚ್.ಇ. ದಾದಾ ಕಲಂದರ್, ಕೊಪ್ಪಳ ಜಿಲ್ಲಾ ಅಧ್ಯಕ್ಷ ಖಾಸಿಂವಲಿ ಮುದ್ದಾಬಳ್ಳಿ, ಗಂಗಾವತಿ ತಾಲೂಕ ಅಧ್ಯಕ್ಷ ಟಿಪ್ಪು ಸುಲ್ತಾನ್ ಇನ್ನು ಮುಂತಾದ ಅವರು ಉಪಸ್ಥಿತರಿದ್ದರು.
