
ಉದಯವಾಹಿನಿ ಕಲಬುರಗಿ : ಗ್ರಾಮ ಸಹಾಯಕರ ಹುದ್ದೆಯನ್ನು ಕಂದಾಯ ಇಲಾಖೆ ಡಿ ದರ್ಜೆಗೇರಿಸಿ ಹಾಗೂ ವೇತನ ಪರಿಷ್ಕರಣೆ ಜತೆಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಎನ್ ದೇವರಾಜ ಸರಕಾರಕ್ಕೆ ಆಗ್ರಹಿಸಿದರು.ಕಲ್ಬುರ್ಗಿ ನಗರದ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಗ್ರಾಮ ಸಹಾಯಕರ ಬೃಹತ್ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಕಳೆದ 45 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಪ್ರಮಾಣಿಕ ಕೆಲಸ ಮಾಡುತ್ತಿರುವ ಗ್ರಾಮ ಸಹಾಯಕರಿಗೆ ಭದ್ರತೆ ಒದಗಿಸುವಂತೆ ಹಲವಾರು ಭಾರಿ ಮನವಿ ಮಾಡಿದರು ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ನೋವಿನಿಂದ ನುಡಿದರು.ಕಲ್ಬುರ್ಗಿ ವಿಭಾಗದ ಉಪಾಧ್ಯಕ್ಷ ಲಕ್ಷ್ಮೀಪುತ್ರ ಸಾಗರ ಹಾಗೂ ಅಫಜಲಪುರ ತಾಲೂಕ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಅಣ್ಣರಾಯ ಜಮಾದಾರ ಮಾತನಾಡಿ ಗ್ರಾಮ ಸಹಾಯಕರು ದಿನದ 24 ಗಂಟೆಗಳ ಕಾಲ ಮಳೆ ಇರಲಿ, ಚಳಿ ಇರಲಿ ಏನೆ ಇರಲಿ ಪ್ರಮಾಣಿಕವಾಗಿ ಜನರ ಸೇವೆ ಮಾಡುತ್ತಾರೆ ಆದರೆ ಇವರು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಸೇವಾ ಭದ್ರತೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಗ್ರಾಮ ಸಹಾಯಕರು ಮರಣ ಹೊಂದಿದರೆ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಕೆಲಸ ಕೊಡಬೇಕು ಮತ್ತು ಸೇವೆಯಿಂದ ನಿವೃತ್ತರಾದವರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸರಕಾರ ಮುಂದಾಗಬೇಕು ಎಂದು ಸರಕಾರಕ್ಕೆ ಸಭೆಯಲ್ಲಿ ಒತ್ತಾಯಿಸಿದರು.
ಸಭೆಯಲ್ಲಿ ಗ್ರಾಮ ಸಹಾಯಕರ ಧ್ವಜ ಬಿಡುಗಡೆ ಮತ್ತು ಗ್ರಾಮ ಸಹಾಯಕರ ಸಂಘದ ಜಿಲ್ಲಾ ಅಧ್ಯಕ್ಷರಿಗೆ ರಾಜ್ಯ ಸಂಘದ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.
* ಸಭೆಯಲ್ಲಿ ಚರ್ಚೆಗಳು*
ಚಳಿಗಾಲ ಅಧಿವೇಶನಕ್ಕೆ ಸಿದ್ದತೆ ಯಾವ ರೀತಿ ಮಾಡಿಕೊಳ್ಳಬೇಕು , ಗ್ರಾಮ ಸಹಾಯಕರ ಒಗ್ಗಟ್ಟಿನ ಶಕ್ತಿ ಮೂಲಕ ರಾಜ್ಯ ಸರಕಾರಕದ ಮುಂದೆ ಶಕ್ತಿ ಪದರ್ಶನ ಯಾವ ರೀತಿ ಮಾಡಬೇಕು ಎಂಬುವುದು ಚರ್ಚ ಮಾಡಲಾಯಿತು, ಗ್ರಾಮ ಸಹಾಯಕರ ಬೇಡಿಕೆಗಳ ಕುರಿತು ನ್ಯಾಯಾಲಯದ ಆದೇಶ ಕುರಿತು ಚರ್ಚೆ, ಗ್ರಾಮ ಸಹಾಯಕರ ಸಂಘದ ಕುಂದು ಕೊರೆತೆಗಳ ಮತ್ತು ಹೋರಾಟದ ಮುಂದಿನ ರೂಪರೇಶಗಳು ಕುರಿತು ಸಮಗ್ರವಾಗಿ ಚರ್ಚೆಸಲಾಯಿತು.
ಈ ಸಭೆಯಲ್ಲಿ ಗ್ರಾಮ ಸಹಾಯಕರ ಸಂಘದ ಉಪಾಧ್ಯಕ್ಷ ಹೊನ್ನೆಶಪ್ಪ ,ಸಮನ್ವಯ ಸಮಿತಿ ರಾಜ್ಯಧ್ಯಕ್ಷರಾದ ಮಡಿವಾಳಪ್ಪ ವನ್ನೂರ, ಹೋರಾಟಗಾರ ಪಾವಗಡ ಶ್ರೀರಾಮ ,, ಕಲ್ಬುರ್ಗಿ ಜಿಲ್ಲಾಧ್ಯಕ್ಷ ರಾಜ ಅಹ್ಮದ , ಜಿಲ್ಲಾ ಉಪಾಧ್ಯಕ್ಷರಾದ ಅಪ್ಪು ಜಮಾದಾರ, ಗೌರವ ಅಧ್ಯಕ್ಷ ಸಿದ್ದಲಿಂಗ ನಾಟೀಕಾರ, ವಿಭಾಗದ ಜಂಟಿ ಕಾರ್ಯದರ್ಶಿ ವೆಂಕಟೇಶ ಶಿರಗುಪ್ಪ , ರಾಯಚೂರ ಜಿಲ್ಲಾಧ್ಯಕ್ಷ ಸದಾಶಿವ ವಾಲಿಕಾರ ಸೇರಿದಂತೆ ಕಲ್ಬುರ್ಗಿ, ಬೆಂಗಳೂರು, ವಿಜಯಪುರ, ಬಾಗಲಕೋಟ, ಗದಗ, ಯಾದಗಿರಿ, ಬಳ್ಯಾರಿ, ರಾಯಚೂರು, ಹಾಗೂ ಕಲ್ಯಾಣ ಕರ್ನಾಟಕ ಕಲ್ಬುರ್ಗಿ ಪ್ರಾದೇಶಿಕ ವಿಭಾಗದ ಗ್ರಾಮ ತಾಲೂಕ, ಜಿಲ್ಲೆ,, ವಿವಿಧ ಗ್ರಾಮಗಳ ಗ್ರಾಮ ಸಹಾಯಕರು ನೂರಾರು ಸಂಖ್ಯೆಯಲ್ಲಿ
ಸಭೆಯಲ್ಲಿ ಭಾಗಿಯಾಗಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.
