
ಉದಯವಾಹಿನಿ ಸಿಂದಗಿ: ನಗರದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವದಳ ಸೇರಿದಂತೆ ಅನೇಕ ಬಸವಪರ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರಿಂದ ವಿಜಯಪುರ ಜಿಲ್ಲೆಯನ್ನು ಬಸವಪುರ ಜಿಲ್ಲೆಯನ್ನಾಗಿ ಮಾಡಲು ಹಾಗೂ ಕರ್ನಾಟಕ ರಾಜ್ಯದ ಹೆಸರನ್ನು ಬಸವ ನಾಡು ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ತಹಶೀಲ್ದಾರ ಅವರ ಮೂಲಕ ಮನವಿ ಸಲ್ಲಿಸಿದ್ದರು.ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಮುಖಂಡ ಜಗದೀಶ್ ಕಲಬುರ್ಗಿ, ಚಂದ್ರಶೇಖರ ದೇವರಡ್ಡಿ, ಸಂಗೀತ ಪಾಟೀಲ, ರಾಷ್ಟ್ರೀಯ ಬಸವದಳದ ಗುರುಪಾದ ತಾರಾಪುರ, ಶಿವಬಸು ಶಿವಸಿಂಪಿಗೇರ, ಮಲಕಣ್ಣ ತಳವಾರ, ಸಂಗಣ್ಣ ಬ್ಯಾಕೋಡ ಹಾಗೂ ಇನ್ನೂ ಅನೇಕ ದುರಿಣರು ಮಾತನಾಡಿದರು.ಶ್ರೀಮತಿ ಶರಣಮ್ಮ ನಾಯಕ್ ಮನವಿ ಪತ್ರವನ್ನು ಓದಿದರು. ರಾಷ್ಟ್ರೀಯ ಬಸವದಾಳ ಜಾಗತಿಕ ಲಿಂಗಾಯತ ಗುರುನರು ಮನವಿ ಪತ್ರವನ್ನು ತಹಶೀಲ್ದಾರರಿಗೆ ಅರ್ಪಿಸಿದರು. ಸಂದರ್ಭದಲ್ಲಿ ತಹಶೀಲ್ದಾರರು ಮಾತನಾಡಿ ಪ್ರಾಮಾಣಿಕವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ತಲುಪಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರುಗಳಾದ ಶಿವು ಹತ್ತಿ ಪಿ.ಎಲ್.ಡಿ ಬ್ಯಾಂಕ್ ಮ್ಯಾನೇಜರ್ ರವಿಗೌಡ ದೇಸಾಯಿ,ಕಾಳಪ್ಪಗೌಡ ಬಗಲಿ,ಗುರುಪಾದ ತಾರಾಪುರ, ಶಾಂತೂ ರಾಣಗೋಳ, ಸಿದ್ದು ಸುಂಟಿ,ಮಲ್ಲಿಕಾರ್ಜುನ ಅರ್ಜುನಗಿ, ದಾನಪ್ಪ ಜೋಗುರ,ಅಶ್ವಿನಿ ಪಾತ್ರೋಟ,ಶಾರದಾ ಬೆಟಿಗೇರಿ,ಜ್ಯೋತಿ ಗುಡಿಮನಿ, ವರ್ಷ ಪಾಟೀಲ ಹಾಗೂ ರಾಷ್ಟ್ರೀಯ ಬಸವದಳ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕರ್ತರು ಉಪಸ್ಥಿತರಿದ್ದರು.
