
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಸಾಲೇ ಬೀರನಳ್ಳಿ ಗ್ರಾಮದ ಮಾರುತೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಡಿಯಲ್ಲಿ ಮಂಜೂರಾಗಿರುವ 1ಲಕ್ಷ ಮೊತ್ತದ ಡಿ.ಡಿಯನ್ನು ದೇವಸ್ಥಾನದ ಸಮಿತಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣರವರು ಹಸ್ತಾಂತರ ಮಾಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಲ್ಲಿ ತಾಲ್ಲೂಕಿನ ಸಂಘ ಸಂಸ್ಥೆಗಳ ಮಹಿಳಾ ಸ್ವಸಹಾಯ ಸಂಘಗಳಿಗೆ ಅನೇಕ ಯೋಜನೆಗಳಿದ್ದು ಮಹಿಳೆಯರು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದರು.ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ತಾಲ್ಲೂಕಾ ಯೋಜನಾಧಿಕಾರಿ ಗೋಪಾಲ್ ಜೀ,ಗ್ರಾಮದ ಮುಖಂಡರು ಅಶೋಕ ಪಾಟೀಲ್,ಬಸರೆಡ್ಡಿ ಸೇರಿಕಾರ,ಶ್ರೀನಿವಾಸರೆಡ್ಡಿ ಸೇರಿಕಾರ,ಪೊಲೀಸ್ ಇಲಾಖೆ ನಿವೃತ್ತ ಅಧಿಕಾರಿ ಮಹೇಬೂಬ ಅಲಿ,ಗ್ರಾಮ ಪಂಚಾಯತ ಅಧ್ಯಕ್ಷೆ ರಾಜೇಶ್ವರಿ ಪ್ರಭು,ಉಪಾಧ್ಯಕ್ಷ ರಾಜಶೇಖರ ದಂಡಿನ್,ದೇವಸ್ಥಾನದ ಉಪಾಧ್ಯಕ್ಷ ಸಂಗಮನಾಥ ರೆಡ್ಡಿ,ದೇವಸ್ಥಾನ ಸಮಿತಿಯ ಸದಸ್ಯರು,ಶೌರ್ಯ ವಿಪತ್ತು ತಂಡದ ಸ್ವಯಂ ಸೇವಕರು,ವಲಯದ ಮೇಲ್ವಿಚಾರಕರು,ಸ್ವಸಹಾಯ ಸಂಘಗಳ ಸದಸ್ಯರು,ಹಾಗೂ ಸೇವಾ ಪ್ರತಿನಿಧಿಯವರು ಅನೇಕರಿದ್ದರು.
