
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಕಡ್ಲೆವಾಡ, ಚಿಕ್ಕರೂಗಿ, ಅಂಕಲಗಿ ಹಾಗೂ ಜಂಬಗಿ ಕೆರೆಗಳಿಗೆ ನೀರು ತುಂಬಿಸಲು ಇಂದು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡರು ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ಮುಖಂಡರು ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆ ತಾಲೂಕಿನಲ್ಲಿಯೇ ಬಹು ದೊಡ್ಡ ಕೆರೆ ಈ ವರ್ಷ ಮಳೆ ಬಾರದೆ ಕೆರೆ ಬತ್ತಿ ಹೋಗಿದೆ, ಹಲವಾರು ಬಾರಿ ಚಿಮ್ಮಲಗಿ ಯಾತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸಲಾಗಿದ್ದು, ಆದರೆ ಈ ಭಾಗದ ಕೆರೆಗಳಿಗೆ ಇನ್ನೂ ನೀರು ಬಾರದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ. ವಾರ ಬಂದಿ ಪ್ರಕಾರ ನೀರು ಬಿಡದೆ, ತಿಂಗಳ ಪೂರ್ತಿ ನೀರು ಬಿಟ್ಟರೆ ಕೆರೆಗಳಿಗೆ ನೀರು ಬರುತ್ತವೆ ಇಲ್ಲದಿದ್ದರೆ ಈ ಬಾರಿ ಕೆರೆಗೆ ನೀರಿಲ್ಲದಿದ್ದರೆ ಬೇಸಿಗೆ ಸಮಯದಲ್ಲಿ ಜನ ಜಾನುವಾರುಗಳಿಗೆ ಮೇವು ಕುಡಿಯಲು ನೀರು ಸಿಗದೇ ಹಾಹಾಕಾರ ಪರಿಸ್ಥಿತಿ ಉಂಟಾಗಲಿದೆ. ಹಲವಾರು ಬಾರಿ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಭರವಸೆ ನೀಡಿ ಹೋಗಿದ್ದಾರೆ ಹೊರತು ನೀರು ಬಂದಿಲ್ಲ. ಈಗಲಾದರೂ ಸರ್ಕಾರ ಕೆರೆಗಳಿಗೆ ಕಾಲುವೆಗಳ ಮೂಲಕ ನೀರು ತುಂಬಿಸಿ ಈ ಭಾಗದ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ, ಮಂಗಳವಾರದಂದು ಇಂಡಿ ದೇವರಹಿಪ್ಪರಗಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಸಂಗನಗೌಡ ಬಿರಾದಾರ, ಸಾಹೇಬಗೌಡ ರೆಡ್ಡಿ, ಸೇರಿದಂತೆ ಮುಳಸಾವಳಗಿ, ಕಡ್ಲೇವಾಡ, ಚಿಕ್ಕರೂಗಿ ಗ್ರಾಮ ರೈತ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
