ಉದಯವಾಹಿನಿ ಸಿಂಧನೂರು :ಜವಳಗೇರಾ ಸೇರಿದಂತೆ ಜಿಲ್ಲೆಯ ಎಲ್ಲಾ ಹೆಚ್ಚುವರಿ  ಭೂ  ಪ್ರಕರಣಗಳ ಮರು ವಿಚಾರಣೆಗೆ ಒತ್ತಾಯಿಸಿ; ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಪ್ರತಿಭಟನೆ ಕುರಿತು ಮಾತನಾಡಿದ ರಾಜ್ಯ ಸಂಚಾಲಕ ಎಂ ಗಂಗಾಧರ್ ಅವರ 1961 – 1974ರಲ್ಲಿ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆಯನ್ನು ಭಾರಿ ಭೂಮಾಲೀಕರು ಹಾಗೂ ಅಧಿಕಾರಿಗಳು ಬುಡಮೇಲು ಮಾಡಿ, ಬಡವರಿಗೆ ಹಂಚಬೇಕಾದ ಹೆಚ್ಚುವರಿ ಭೂಮಿಯನ್ನು ಕಳ್ಳ ದಾರಿಯಲ್ಲಿ ಭೂಮಾಲೀಕರಿಗೆ ಹಿಂದಿರುಗಿಸಿದ್ದಾರೆ ಎಂದರು .ಇದಕ್ಕೆ ಜವಳಗೇರಾ ನಾಡಗೌಡರ 4900 ಎಕರೆ ಭೂ ಹಗರಣ ಸುಪ್ರೀಮ್ ಸಾಕ್ಷಿಯಾಗಿದೆ. ಇದೇ ದಾರಿಯಲ್ಲಿ ರಾಯಚೂರು ಜಿಲ್ಲೆಯ ಎಲ್ಲಾ ಭೂಮಾಲೀಕರು ಇವತ್ತಿಗೂ ಸಾಕಷ್ಟು ಭೂಮಿಯನ್ನು ಹೊಂದಿದ್ದಾರೆ. “ದೇವರಾಜು ಅರಸು ಸರಕಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಭೂರಹಿತರಿಗೆ ಭೂಮಿ ಹಂಚಲಾಗಿದೆ” ಎಂಬ ಸರಕಾರಿ ಪ್ರಕಟಣೆಯೂ ಸುಪ್ರೀಮ್ ಸುಳ್ಳುಗಳಿಂದ ಕೂಡಿದೆ ಎಂದರು.ಜವಳಗೇರಾ ನಾಡಗೌಡರ ಪ್ರಕರಣವು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಹೆಚ್ಚುವರಿ ಭೂ ಪ್ರಕರಣಗಳನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961 ಸೆಕ್ಷನ್ 122(ಎ) ಅಡಿ ಮರು ವಿಚಾರಣೆ ನಡೆಯಿಸಬೇಕೆಂದು ದಿ: 18-10-2023 ರಂದು ಸಿಂಧನೂರು ತಹಶೀಲ್ದಾರರು, ಲಿಂಗಸೂಗೂರು ಸಹಾಯಕ ಆಯುಕ್ತರು ಹಾಗೂ ರಾಯಚೂರು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಭೂರಹಿತರ ಪರವಾಗಿ ಪಿಟೇಷನ್ ನೀಡಲಾಗಿದೆ. ಆದರೆ, ಅಧಿಕಾರಿಗಳು ಗಪ್‌ಚುಪ್ ಆಗಿದ್ದಾರೆ. ಆದ್ದರಿಂದ ಇಂದು ನವೆಂಬರ್ 6 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕ ಕೇಂದ್ರಗಳಲ್ಲಿ ಪ್ರತಿಭಟನೆಯ ಮೂಲಕ ಜವಳಗೇರಾ ಪ್ರಕರಣದಲ್ಲಿ 64 ಎಕರೆ 29 ಗುಂಟೆ ಹೆಚ್ಚುವರಿ ಭೂಮಿಯಲ್ಲಿ ಇಲ್ಲಿ ಭೂರಹಿತ ಕೃಷಿ ಕಾರ್ಮಿಕರು ನಡೆಸಿರುವ ಅನಿರ್ದಿಷ್ಟ ಹಗಲು ರಾತ್ರಿ ಧರಣಿ 32ನೆ ದಿನಕ್ಕೆ ಕಾಲಿಟ್ಟಿದೆ. ಸದರಿ ಜಮೀನಿನಲ್ಲಿ ಭೂರಹಿತರು ಮಾಡುತ್ತಿರುವ ಸಾಗುವಳಿಗೆ ಸಿಂಧನೂರು ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ.ಎಂದು ಆರೋಪಿಸಿದರು.ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡರು ಮೌನವಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಕರ್ತವ್ಯ ಪಾಲನೆ ಮಾಡುತ್ತಿಲ್ಲ. 39 ವರ್ಷಗಳಿಂದ ನಾಡಗೌಡರ ಕಾನೂನು ಬಾಹೀರ ಸಾಗುವಳಿ ತಡೆಯದ ಅಧಿಕಾರಿಗಳು, ಈಗ ಕಾನೂನು-ಕರ್ತವ್ಯ ಎಂದು ಭೂರಹಿತ ಕೃಷಿ ಕಾರ್ಮಿಕರ ಸಾಗುವಳಿಗೆ ಅಡ್ಡಗಾಲ್ಹಾಕುತ್ತಿದ್ದಾರೆ. ಈ ರೀತಿಯ ಬೆದರಿಕೆ ಹಾಗೂ ಸಾಗುವಳಿ ತಡೆಯುವ ಕ್ರಮವನ್ನು ಖಂಡಿಸಿ ಈ ಪ್ರತಿಭಟನೆ ನಡೆದಿದೆ.ಕೂಡಲೇ ಜಿಲ್ಲಾಧಿಕಾರಿಗಳು ಈ ಕೆಳಗಿನ ಹಕ್ಕೋತ್ತಾಯಗಳನ್ನು ಕೂಡಲೇ ಪರಿಹರಿಸಬೇಕೆಂದು ಜಿಲ್ಲೆಯಾದ್ಯಂತ ಹೋರಾಟದ ಮೂಲಕ ತಾಲ್ಲೂಕು ತಹಶೀಲ್ದಾರ್ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!