
ಉದಯವಾಹಿನಿಪೀಣ್ಯ ದಾಸರಹಳ್ಳಿ: ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ನಾಡಗೀತೆ ಚಿತ್ರೀಕರಣಕ್ಕೆ ಚಾಲನೆ ನೀಡಿ ಪೋಷಕ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ನಾಡಿನ ಕಲೆ ಸಂಸ್ಕೃತಿ ಆಚಾರ ವಿಚಾರ ನೆಲ ಜಲ ಭಾಷೆಯ ಉಳಿವಿಗಾಗಿ ಕಲಾವಿದರ ಕೊಡುಗೆ ಅಪಾರವಾದದ್ದು ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ನನ್ನ ಪುಣ್ಯ ಎಂದು ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಹೇಳಿದರು. ಇಂತಹ ಕಲಾವಿದರು ನಮ್ಮ ನಾಡಿನಲ್ಲಿ ಪೋಷಕ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ನಮ್ಮ ನಾಡಿನ ಕಲೆ ಸಂಸ್ಕೃತಿ ಸಾಹಿತ್ಯವನ್ನು ಉಳಿಸಿ ಬೆಳೆಸಲಿ ಎಂದು ಹಾರೈಸಿದರು. ನಂತರ ಅವರು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘಕ್ಕೆ ಸಹಾಯಸ್ತ ನೀಡಿ ಇನ್ನು ಮುಂದೆಯೂ ಸಹ ನನ್ನ ಕೈಲಾದಷ್ಟು ಸಹಾಯ ಹಸ್ತವನ್ನು ಕಲಾಸಂಘಗಳಿಗೆ ಸದಾ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು. ಪೋಷಕ ಕಲಾವಿದರಿಗೆ ಮೈಸೂರು ಪೇಟೆ ಧರಿಸಿ ಶಾಲು ಹೊದಿಸಿ ಫಲ ಪುಷ್ಪಗಳಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ. ಪೋಷಕ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ನವನೀತ, ಉಪಾಧ್ಯಕ್ಷೆ ಕವನ ,ಉಮಾಶಂಕರ್,ಜಂಟಿ ಕಾರ್ಯದರ್ಶಿ ಸುಧಾ,ಆರ್ ವಿಜಯಕುಮಾರ್, ಕಲಾವಿದರಾದ ಆಡುಗೋಡಿ ಶ್ರೀನಿವಾಸ್. ಕಾರ್ಯಕಾರಿ ಸಮಿತಿ ಸದಸ್ಯ ಡಾ. ನಾಗರಾಜ್. ಸುಲೋಚನ, ವಿಜಯಕುಮಾರ್, ವೈ ಜಿ ಪ್ರಕಾಶ್ ಸೇರಿದಂತೆ ಹಲವಾರು ಗಣ್ಯರು ಕಲಾ ಅಭಿಮಾನಿಗಳು ಮುಂತಾದವರು ಭಾಗವಹಿಸಿದ್ದರು.
